ಕಲಬುರಗಿ: ಕುರಿಗಳ್ಳತನ ವೇಳೆ ಕೊಲೆ; ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

ಕಲಬುರಗಿ: ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಮೇಲೆ 3 ಜನ ಆರೋಪಿಗಳು ಕುರಿಗಳ್ಳತನ ಮಾಡುವ ಸಂದರ್ಭದಲ್ಲಿ ಕೊಲೆ ಮಾಡಿರುವುದು ಅವಮಾನವೀಯ ಕೃತವಾಗಿದೆ. ಕೂಡಲೇ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘ ಚಿಂಚೋಳಿ ತಾಲೂಕ ಅಧ್ಯಕ್ಷ ಹಣಮಂತ ಕೆ. ಪೂಜಾರಿ ಒತ್ತಾಯಿಸಿದ್ದಾರೆ.
ಈ ಘಟನೆಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಸರ್ಕಾರ ಕುರಿಗಾರರ ಹಿತ ರಕ್ಷಣಾ ಕಾಯಿದೆ ತಕ್ಷಣವೇ ಜಾರಿಗಾಗಿ ತರಬೇಕು. ಕುರಿಗಾಹಿಗಳಿಗೆ ರಕ್ಷಣೆ ಮತ್ತು ಭದ್ರತೆಗಾಗಿ ಸರ್ಕಾರ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ರಾಜ್ಯಾದ್ಯಂತ ಹಲವಾರು ವರ್ಷಗಳಿಂದ ಕುರಿಗಾಹಿಗಳ ಆಗ್ರಹವಾಗಿದೆ. ಈ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. 2023-24 ನೇ ಸಾಲಿನ ಬಜೆಟ್ನಲ್ಲಿ ಕುರಿಗಾರರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಭರವಸೆಯನ್ನು ನೀಡಿದ್ದರು, ಆದರೆ ಕಾಯ್ದೆಯನ್ನು ಜಾರಿಗೆ ತರಲಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಮತ್ತು ಕುರಿಗಾಯಿ ಶರಣಪ್ಪ ಜಮ್ಮನಕಟ್ಟಿ ಗೆ ಸರ್ಕಾರದಿಂದ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘ ಕಾಳಗಿ ಅಧ್ಯಕ್ಷ ರೇವಣಸಿದ್ದಪ್ಪ ಅಣಕಲ್, ಗೋಪಾಲ ಎಮ್.ಪಿ ಗಾರಂಪಳ್ಳಿ ,ರವಿ ದಸ್ತಾಪೂರ, ಗುಂಡಪ್ಪ ಚಿಮ್ಮಾ ಇದಲಾಯಿ, ಕುರಿಗಾಹಿ, ರಂಗಣ್ಣ ಪೊಲೀಸ್ ಚಂದ್ರಂಪಳ್ಳಿ, ಮಹಾದೇವಪ್ಪ ಚಿಮ್ಮಾ ಇದಲಾಯಿ, ರವಿ ದಸ್ತಾಪೂರ ಮಾಹಾದೇವನ್ನ, ನಾಗಪ್ಪ ಯಲಮಡಗಿ ನಾಗಳಾ, ಜಗಪ್ಪ ದಸ್ತಾಪೂರ, ಬಾಬು ಹುವಿನಬಾವಿ, ಮಲ್ಲು ಹುವಿನಬಾವಿ, ರಾಜಕುಮಾರ ಕನಕಪೂರ, ಅಭಿಶೇಕ್ ಮಲ್ಕಾನೋರ, ಅಂಜಪ್ಪ ಕಲ್ಕೂರ ಇದ್ದರು.