ಕಲಬುರಗಿ | ಶುದ್ಧ ಗಾಳಿ ಸೇವಿಸಿ ಹಲವು ಬಗೆಯ ರೋಗಗಳನ್ನು ದೂರು ಮಾಡಿ: ಡಾ.ಚನ್ನಮಲ್ಲ ಶಿವಾಯೋಗಿ

ಕಲಬುರಗಿ : ಮಾನವ ಇಂದು ಸಾಕಷ್ಟು ರೋಗಗಳಿಗೆ ತುತ್ತಾಗಿ ಹಲವಾರು ಬಗೆಯ ಔಷಧಿ ಸೇವನೆ ಮಾಡಿದರೂ ಕಾಯಿಲೆ ವಾಸಿಯಾಗುತ್ತಿಲ್ಲ. ಪ್ರತಿಯೊಬ್ಬರು ನಿತ್ಯ ಬೆಳಗಿನ ಜಾವ ಯೋಗಾ ಮಾಡುವುದರಿಂದ ಶುದ್ಧ ಗಾಳಿ ಸೇವನೆಯಾಗುತ್ತದೆ. ಇದರಿಂದ ಸದೃಢ ಆರೋಗ್ಯವಂತರಾಗಲು ಸಾಧ್ಯವಾಗುತ್ತದೆ ಎಂದು ಬಡದಾಳ, ಮಾಡಿಯಾಳ ಚನ್ನಮಲ್ಲ ಮಠದ ಶ್ರೀ ಡಾ.ಚನ್ನಮಲ್ಲ ಶಿವಾಯೋಗಿ ಶಿವಾಚಾರ್ಯರು ಹೇಳಿದರು.
ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ದಿ.ಮಲ್ಲೇಶಪ್ಪ ಬಿರಾದಾರ ಅವರ 4ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡ ʼಉಚಿತ ಯೋಗ ಶಿಬಿರʼ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರೈತರು ಇಂದಿನ ದಿನಗಳಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಬೆಳೆಗಳಿಗೆ ವಿವಿಧ ಕಂಪನಿಗಳ ಕ್ರೀಮಿ ನಾಶಕ ಔಷಧಿಗಳನ್ನು ಸಿಂಪಡಣೆ ಮಾಡುತ್ತಿರುವುದರಿಂದ ಎಲ್ಲಾ ಧಾನ್ಯಗಳು ವಿಷಕಾರಿಯಾಗಿವೆ. ಇದನ್ನು ಸೇವಿಸಿದ ಎಲ್ಲರೂ ರೋಗಗಳಾಗುತ್ತಿರುವುದನ್ನು ಕಾಣಲಾಗುತ್ತಿದೆ. ಇಂದು ವೈದ್ಯರಿಗೂ ಸವಾಲಾದ ಮತ್ತು ಹೆಸರೇ ಇಲ್ಲದ ಕಾಯಿಲೆಗಳು ಜನ್ಮತಾಳುತ್ತಾರುವುದು ಮಾನವರ ಅಳಿವು ಉಳಿವಿನ ಮಧ್ಯ ಜೀವಿಸುವಂತಾ ಗಂಡಾoತರ ಎದುರಾಗುತ್ತಿದೆ ಎಂದು ಅವರು ಆತಂಕ ಹೊರಹಾಕಿದರು.
ಗ್ರಾಮದ ಯುವ ಮುಖಂಡ ಚನ್ನು ಬಿರಾದಾರ ಮಾತನಾಡಿ, ಪ್ರತಿ ವರ್ಷ ದಿ.ಮಲ್ಲೇಶಪ್ಪ ಬಿರದಾರ ಪುಣ್ಯಸ್ಮರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಯೋಗ ಶಿಬಿರವೂ ಕೂಡ ನಡೆಸಲಾಗುತ್ತಿದೆ. ಪ್ರತಿಯೊಬ್ಬರು ಯೋಗಾ ತರಬೇತಿ ಲಾಭ ಪಡೆದು ನಿತ್ಯ ಜೀವನದಲ್ಲಿ ಯೋಗಮಾಡಿ ಆರೋಗ್ಯವಂತರಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕ ದತ್ತಾತ್ರೇಯ ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಸಂಗಣ್ಣ ಮುದ್ದಡಗಿ, ಪ್ರಭು ಸಿಎ, ಸದಾಶಿವ ಉಪ್ಪಿನ, ಪ್ರಭಾಕರ ಬಿರಾದಾರ, ಸಿದ್ದರಾಮ ಶಿರೋಳ, ಸಂಗಮ್ಮನಾಥ ಉಪ್ಪಿನ, ಈರಣ್ಣ ನಿಂಬಾಳ, ಗುರುಬಸಯ್ಯ ಸ್ವಾಮಿ, ಅರ್ಜುನ ಬಂಡೆ, ಪ್ರಭಾಕರ ಬೆಳಮಗಿ, ಸಿದ್ದರಾಮ ಉಪ್ಪಿನ, ಕಸಾಪ ಸಂಘಟಕ ಸುಧಾಕರ್ ಖಂಡೆಕರ್, ಪ್ರಕಾಶ ಹರಳಯ್ಯ, ಹಣಮಂತ ಶಿರೂರ, ಈರಣ್ಣಾ ಕೌಲಗಿ, ಶರಣಪ್ಪ ಕಂಬಾರ, ಶರಣಬಸಪ್ಪ ಮಡ್ಡಿತೋಟ್ ಸೇರಿದಂತೆ ಅನೇಕರು ಯೋಗಾ ಶಿಬಿರದಲ್ಲಿ ಭಾಗವಹಿಸಿದರು.