ಕಲಬುರಗಿ | ಗಣಿತವನ್ನು ಕಲಿಯಲು ಯುವ ಮನಸ್ಸುಗಳನ್ನು ಪ್ರೇರೇಪಿಸಬೇಕು : ಬಟ್ಟು ಸತ್ಯನಾರಾಯಣ

Update: 2025-03-18 19:40 IST
Photo of Program
  • whatsapp icon

ಕಲಬುರಗಿ: "ಗಣಿತವನ್ನು ಉತ್ಸಾಹದಿಂದ ಕಲಿಯಲು ಯುವ ಮನಸ್ಸುಗಳನ್ನು ಪ್ರೇರೇಪಿಸಬೇಕಾಗಿದೆ" ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಗಣಿತ ವಿಭಾಗ ಆಯೋಜಿಸಿದ್ದ ಅಂತರರಾಷ್ಟ್ರೀಯ 2025ನೇ ಗಣಿತ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸುರತ್ಕಲ್‌ನ ಎನ್‌ಐಟಿಯ ಪ್ರೊ.ಬಿ.ಆರ್.ಶಂಕರ್ ಅವರು "ಗಣಿತ, ಕಂಪ್ಯೂಟಿoಗ್, ಆಟಗಳು ಮತ್ತು ಒಂದು ಮಿಲಿಯನ್ ಡಾಲರ್ಸ್" ಕುರಿತು ಉಪನ್ಯಾಸ ನೀಡಿದರು. ಬ್ರಹ್ಮ ಗೋಪುರ, ನೈಟ್ಸ್ ಟೂರ್ ಸಮಸ್ಯೆ, ಮತ್ತು ಶತಮಾನಗಳಿಂದ ಗಣಿತಜ್ಞರನ್ನು ಕುತೂಹಲಕ್ಕೆ ಗುರಿ ಮಾಡಿದ ಇತರ ಗಣಿತದ ಪ್ರಸಿದ್ಧ ಒಗಟುಗಳನ್ನು ಕುರಿತು ಚರ್ಚಿಸಿದರು.

ಡಾ.ವಿದ್ಯಾಧರ್ ಉಪಾಧ್ಯ ಅವರು "ಜನರೇಟಿವ್ ಮಾಡೆಲ್ಸ್" ಕುರಿತಂತೆ ಮಹತ್ವದ ವಿಷಯಗಳನ್ನು ತಿಳಿಸಿದರು.  "ಆಧುನಿಕ ಕೃತಕ ಬುದ್ಧಿಮತ್ತೆ ಮಾದರಿಗಳು ಸಂಭವನೀಯತೆ ವಿತರಣಾ ಮಾದರಿಗಳನ್ನು ಬಳಸಿಕೊಂಡು ಚಿತ್ರಗಳನ್ನು ಉತ್ಪಾದಿಸುತ್ತವೆ. ಗೌಸಿಯನ್ ವಿತರಣಾ ಪರಿಕಲ್ಪನೆಗಳು, ನರಮಂಡಲ ಜಾಲಗಳು ಮತ್ತು ಆಳವಾದ ಕಲಿಕೆಯ ವಿಧಾನಗಳಂತಹ ತಂತ್ರಜ್ಞಾನಗಳು ಇಂದಿನ ಜಗತ್ತಿನಲ್ಲಿ ಬಹಳ ಮುಖ್ಯ" ಎಂದು ವಿವರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂಘಟನಾ ಕಾರ್ಯದರ್ಶಿ ಡಾ.ಸುಮುಖ ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಗಣಿತದ ಅರಿವನ್ನು ಉತ್ತೇಜಿಸುವ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಮತ್ತು ಸಂಚಾಲಕ ಡಾ.ಜಿ.ಜನಾರ್ದನ ರೆಡ್ಡಿ ಸ್ವಾಗತಿಸಿದರು. ಭೌತ ವಿಜ್ಞಾನ ನಿಕಾಯದ ಡೀನ್ ಡಾ.ಭರತ್ ಕುಮಾರ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ.ಎನ್.ಸಂದೀಪ್, ಡಾ.ದೇವಿಕಾ, ಡಾ.ಮೇಘನಾ ಸೇರಿದಂತೆ ಇತರ ಗಣ್ಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಾರಂಭವು ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಹೊಸ ಚಿಂತನೆಗಳಿಗೆ ದಾರಿ ತೆರೆದಿತು ಎಂದು ಭಾಗವಹಿಸಿದ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. ಡಾ.ಸಮೀರ್ ಕರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News