ಕಲಬುರಗಿ | ನಾಳೆ ಎಸೆಸೆಲ್ಸಿ ಪರೀಕ್ಷೆ: ಅಳಂದದಲ್ಲಿ ಬಿಗಿ ಬಂದೋಬಸ್ತ್

Update: 2025-03-19 22:29 IST
ಕಲಬುರಗಿ | ನಾಳೆ ಎಸೆಸೆಲ್ಸಿ ಪರೀಕ್ಷೆ: ಅಳಂದದಲ್ಲಿ ಬಿಗಿ ಬಂದೋಬಸ್ತ್
  • whatsapp icon

ಕಲಬುರಗಿ : ಅಳಂದ ತಾಲೂಕಿನ 16 ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, 5,388 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಪೈಕಿ 11 ಪರೀಕ್ಷಾ ಕೇಂದ್ರಗಳು ಗ್ರಾಮೀಣ ಪ್ರದೇಶ ಹಾಗೂ ಐದು ಆಳಂದ ಪಟ್ಟಣದಲ್ಲಿದ್ದು, ಕೆಲವು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೇಂದ್ರಗಳೆಂದು ಸಹ ಗುರುತಿಸಲಾಗಿದೆ.

ಬಿಗಿ ಬಂದೋಬಸ್ತ್ :

ಪರೀಕ್ಷಾ ನಕಲು ತಡೆಗಟ್ಟಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಕಾಪಾಡಲು ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ. ವೆಬ್ ಕ್ಯಾಮರಾ ಅಳವಡಿಸಿ ನಿಗಾ ವಹಿಸಲಾಗುತ್ತಿದ್ದು, ಪೊಲೀಸ್ ಸಿಬ್ಬಂದಿ ಮತ್ತು ಪರೀಕ್ಷಾ ಅಧಿಕಾರಿಗಳ ಕೈಯಲ್ಲಿ ಕಾರ್ಯಾಚರಣೆಯನ್ನು ನೀಡಲಾಗಿದೆ.

ನಕಲು ತಡೆಗೆ ವಿಶೇಷ ಕ್ರಮ :

ಎಲ್ಲಾ ಕೇಂದ್ರಗಳಲ್ಲಿ ಸುಪರೀಕ್ಷಕರನ್ನು ನೇಮಿಸಿ, ಆಪ್ತ ವೃತ್ತದ ನಿಗಾವ್ಯವಸ್ಥೆ ಮಾಡಲಾಗಿದೆ. ಕಠಿಣ ಕ್ರಮಗಳೊಂದಿಗೆ ಪರೀಕ್ಷೆ ನೇರವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿಕೊಂಡಿವೆ.

ಅಳಂದದಲ್ಲಿ ಬೋರ್ಡ್ ಪರೀಕ್ಷೆಯ ಯಶಸ್ವಿ ನಿರ್ವಹಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಶಿಸ್ತು, ಸುರಕ್ಷತೆ ಹಾಗೂ ನಿಷ್ಪಕ್ಷಪಾತ ಪರೀಕ್ಷಾ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ ಎಂದು ತಾಲೂಕು ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ್‌ ತಿಳಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನವಿ :

ಕ್ಷೇತ್ರ ಶಿಕ್ಷಣಾಧಿಕಾರಿ ಋಷಿಕೇಶ ದಂತಕಾಳ್ಯ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಪಾಲಕರು ಪ್ರವೇಶಿಸದಂತೆ, ಮಕ್ಕಳನ್ನು ಕೇಂದ್ರದ ಹೊರಗಡೆ ಬಿಟ್ಟು ಹೋಗುವಂತೆ ಮನವಿ ಮಾಡಿದ್ದಾರೆ. ಶಾಂತಿಸ್ಥಿತಿ ಕಾಪಾಡಲು ಸಹಕರಿಸುವಂತೆ ಪಾಲಕರಿಗೆ ಮನವಿ ಮಾಡಿದ್ದಾರೆ.

ಸೂಕ್ಷ್ಮ ಅತಿ ಸೂಕ್ಷ್ಮ ಕೇಂದ್ರ :

ಅತಿ ಸೂಕ್ಷ್ಮ ಕೇಂದ್ರಗಳಾದ ಮಾದನಹಿಪ್ಪರಗಾ, ಕಮಲಾನಗರ, ನರೋಣಾ, ಖಜೂರಿ ತಡಕಲ್ ಶಾಲಾ ಕೇಂದ್ರಗಳನ್ನು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದೆ. ಅಲ್ಲದೆ, 5 ಸೂಕ್ಷ್ಮ ಕೇಂದ್ರಗಳಾಗಿ ಪಟ್ಟಣದಲ್ಲಿ ಬಸವೇಶ್ವರ ಶಾಲೆ, ನಿಂಬರಗಾ ಸರ್ಕಾರಿ ಶಾಲೆ, ಆಳಂದ ಆದರ್ಶ ವಿದ್ಯಾಲಯ, ಮಹಾತ್ಮಗಾಂಧಿ ಎಚ್‍ಎಸ್ ಶಾಲೆ ಹಾಗೂ ಯಳಸಂಗಿ ಸರ್ಕಾರಿ ಶಾಲೆ ಕೇಂದ್ರಗಳನ್ನು ಸೂಕ್ಷ್ಮವೆಂದು ಗುರುತಿಸಲಾಗಿದೆ ಎಂದು ಆಳಂದ ಜೂನಿಯರ್ ಕಾಲೇಜನ ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕ ಮರೆಪ್ಪ ಬಡಿಗೇರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News