ಕಲಬುರಗಿ | ತಾತ್ಕಾಲಿಕ ಪಟ್ಟಿ ಪ್ರಕಟ : ಆಕ್ಷೇಪಣೆಗೆ ಆಹ್ವಾನ
Update: 2025-03-20 21:26 IST

ಕಲಬುರಗಿ : ಕಲಬುರಗಿ ಮಹಾನಗರಪಾಲಿಕೆ ಶೇ.5ರ ಯೋಜನೆಯಡಿ 2024-25ನೇ ಸಾಲಿಗಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬುದ್ದಿಮಾಂದ್ಯ ಮಕ್ಕಳಿಗೆ ಫೀಜಿಯೋಥೆರಫಿ ಒಳಪಡಿಸಲು ಅರ್ಜಿ ಆಹ್ವಾನಿಸಿ, ಅರ್ಹ ಹಾಗೂ ಅನರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಲಬುರಗಿ ಮಹಾನಗರಪಾಲಿಕೆಯ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಆಡಳಿತ) ಅವರು ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ http://www.kalaburagicity.mrc.gov ವೆಬ್‍ಸೈಟ್‍ನಲ್ಲಿಯೂ ಸಹ ಈಗಾಗಲೇ ಪ್ರಚುರಪಡಿಸಲಾಗಿದ್ದು. ಸದರಿ ತಾತ್ಕಾಲಿಕ ಅರ್ಹ ಹಾಗೂ ಅನರ್ಹ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ 2025ರ ಏ.5 ರೊಳಗಾಗಿ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳೊಂದಿಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.