ಕಲಬುರಗಿ | 2025-26ನೇ ಸಾಲಿನ ಚಿತ್ತಾಪುರ ಪುರಸಭೆಯ ಆಯವ್ಯಯ ಮಂಡನೆ

ಕಲಬುರಗಿ : ಚಿತ್ತಾಪುರ ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ಬಜೆಟ್ ವಿಶೇಷ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನ 58 ಸಾವಿರ ರೂ. ಉಳಿತಾಯ ಬಜೆಟ್ ಅಂಗೀಕಾರವಾಯಿತು.
ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಅವರು ಬಜೆಟ್ ಪ್ರತಿಯಲ್ಲಿನ ಮುಖ್ಯಾಂಶಗಳು ಓದುವ ಮೂಲಕ ಸಭೆಗೆ ಚಾಲನೆ ನೀಡಿದರು. ಪುರಸಭೆಯ ಲೆಕ್ಕಾಧಿಕಾರಿ ಕ್ರಾಂತಿದೇವಿ ಅವರು ಬಜೆಟ್ ಪ್ರತಿಯನ್ನು ಸಮಗ್ರವಾಗಿ ಓದಿದರು.
2025-26ನೇ ಸಾಲಿನಲ್ಲಿ ರಾಜಸ್ವ ಖಾತೆಯಿಂದ 1,231.98 ಲಕ್ಷ ರೂ. ಆದಾಯ ಹಾಗೂ 1,231.80 ಲಕ್ಷ ವೆಚ್ಚ ರೂ. 18 ಸಾವಿರ ರೂ. ಉಳಿತಾಯ ನಿರೀಕ್ಷಿಸಲಾಗಿದೆ. ಬಂಡವಾಳ ಖಾತೆಯಿಂದ 484.00 ಲಕ್ಷಗಳ ರೂ. ಆದಾಯ ಹಾಗೂ 483.80 ಲಕ್ಷ ರೂ. ವೆಚ್ಚ, 20 ಸಾವಿರ ರೂ. ಉಳಿತಾಯ ಅಂದಾಜಿಸಲಾಗಿದೆ. ಅಸಾಧಾರಣ ಖಾತೆಯಿಂದ 548.90 ಲಕ್ಷ ರೂ. ಆದಾಯ ಹಾಗೂ 548.70 ಲಕ್ಷ ರೂ. ವೆಚ್ಚ, 20 ಸಾವಿರ ರೂ. ಉಳಿತಾಯ ನಿರೀಕ್ಷಿಸಲಾಗಿದೆ. ಒಟ್ಟು 58 ಸಾವಿರ ರೂ. ಉಳಿತಾಯ ಬಜೆಟ್ ಮಂಡನೆಗೆ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು.
ರಾಜಸ್ವ ಖಾತೆಯಡಿ ಆಸ್ತಿ ತೆರಿಗೆಯಿಂದ 69 ಲಕ್ಷ ರೂ. ಖಾತಾ ಪ್ರತಿಗಳ ಶುಲ್ಕದಿಂದ 30 ಲಕ್ಷ ರೂ., ಖಾತಾ ಬದಲಾವಣೆ ಶುಲ್ಕದಿಂದ 70 ಲಕ್ಷ ರೂ., ನೀರಿನ ಕರ 39.60 ಲಕ್ಷ ರೂ., 15ನೇ ಹಣಕಾಸು ಯೋಜನೆಯಿಂದ 237 ಲಕ್ಷ ರೂ., ಎಸ್.ಎಸ್.ಸಿ (ರಾಜ್ಯ) ಅನುದಾನ 12 ಲಕ್ಷ ರೂ., ಗೃಹಭಾಗ್ಯ ಯೋಜನೆಯಿಂದ 80 ಲಕ್ಷ ರೂ., ಆದಾಯ ನಿರೀಕ್ಷಿಸಲಾಗಿದೆ.
ಬರುವ ಒಂದು ವರ್ಷದಲ್ಲಿ ಸಾಮಾನ್ಯ ಆಡಳಿತದಡಿ ವೈದ್ಯಕೀಯ ವೆಚ್ಚಕ್ಕಾಗಿ 25 ಲಕ್ಷ ರೂ., ಕಾನೂನು ಅಭಿಪ್ರಾಯ, ಅಡಿಟ್ ಶುಲ್ಕವಾಗಿ 30 ಲಕ್ಷ ರೂ., ಬೀದಿ ದೀಪಗಳ ನಿರ್ವಹಣೆಗೆ 25 ಲಕ್ಷ ರೂ., ನಾಗರೀಕ ಸೌಲಭ್ಯದಡಿ ನೀರು ಸರಬರಾಜಿಗೆ ವಿದ್ಯುತ್ ಶುಲ್ಕ ವೆಚ್ಚ 94 ಲಕ್ಷ ರೂ., ನಾಗರೀಕ ಸೌಕರ್ಯದಡಿ (ನೀರು) ಪೈಪ್ ಲೈನ್ ಕಾಮಗಾರಿಗೆ 40 ಲಕ್ಷ ರೂ., ಬಂಡವಾಳ ಖಾತೆಯಡಿ ಕಚೇರಿಯ ಪರಿಕರಗಳಿಗೆ 50 ಲಕ್ಷ ರೂ., ಲೋಕೋಪಯೋಗಿ ಕಾಮಗಾರಿಯಡಿ ರಸ್ತೆಗಳು, ಪಾದಾಚಾರಿ ರಸ್ತೆ ನಿರ್ಮಾಣಕ್ಕೆ 70 ಲಕ್ಷ ರೂ., ರಸ್ತೆ, ಚರಂಡಿ ನಿರ್ಮಾಣಕ್ಕೆ 45 ಲಕ್ಷ ರೂ., ವೆಚ್ಚ ಎಂದು ಅಂದಾಜಿಸಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷೆ ಆತೀಯಾ ಬೇಗಂ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ರಸೂಲ್ ಮಸ್ತಫಾ, ಶೀಲಾ ಕಾಶಿ, ಚಂದ್ರಶೇಖರ ಕಾಶಿ, ನಾಗರಾಜ ಭಂಕಲಗಿ, ವಿನೋದ ಗುತ್ತೆದಾರ್, ಶ್ರೀನಿವಾಸ ಪಾಲಪ್, ಮಲ್ಲಿಕಾರ್ಜುನ ಕಾಳಗಿ, ರಮೇಶ ಬಮ್ಮನಳ್ಳಿ, ಶಾಮ್ ಮೇಧಾ, ಶೃತಿ ಪೂಜಾರಿ, ಪ್ರಭು ಗಂಗಾಣಿ, ಜಗದೀಶ ಚವ್ಹಾಣ್, ಶಿವರಾಜ ಪಾಳೇದ್, ಸಂತೋಷ ಚೌದ್ರಿ, ಕಾಶಿಬಾಯಿ, ಬೇಬಿ ಸೇರಿದಂತೆ ಪುರಸಭೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.