ಕಲಬುರಗಿ | ಚಲಿಸುತ್ತಿದ್ದ ಬಸ್‌ನಲ್ಲಿ ಕಂಡಕ್ಟರ್ ಗೆ ಹೃದಯಾಘಾತ : ಮೃತ್ಯು
Update: 2025-03-30 17:52 IST

ಕಾಶಿನಾಥ್ ಮಲ್ಲಪ್ಪ
ಕಲಬುರಗಿ : ಚಲಿಸುತ್ತಿದ್ದ ಸಾರಿಗೆ ಬಸ್ ನಲ್ಲಿ ಹೃದಯಾಘಾತ ಸಂಭವಿಸಿ ಕಂಡಕ್ಟರ್ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಫರಹತಾಬಾದ್ ಬಳಿ ಶನಿವಾರ ನಡೆದಿದೆ.
ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದ ಕಾಶಿನಾಥ್ ಮಲ್ಲಪ್ಪ (44) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿದ್ದು, ಫರಹತಾಬಾದ್ ಬಳಿ ಏಕಾಏಕಿಯಾಗಿ ಹೃದಯಾಘಾತದಿಂದ ಕಂಡಕ್ಟರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಚಾಲಕ ಹಾಗೂ ಪ್ರಯಾಣಿಕರು ಬಸ್‌ನಲ್ಲೇ ಕಲಬುರಗಿಯ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.