ಕಲಬುರಗಿ | ಅಂತರಂಗದ ಭಾವನೆಗಳನ್ನು ಬಹಿರಂಗಗೊಳಿಸುವ ವಿಶೇಷ ಕಲೆಯೇ ನಾಟಕ : ಅಣವೀರಯ್ಯ ಮಠಪತಿ

Update: 2025-03-27 19:39 IST
ಕಲಬುರಗಿ | ಅಂತರಂಗದ ಭಾವನೆಗಳನ್ನು ಬಹಿರಂಗಗೊಳಿಸುವ ವಿಶೇಷ ಕಲೆಯೇ ನಾಟಕ : ಅಣವೀರಯ್ಯ ಮಠಪತಿ
  • whatsapp icon

ಕಲಬುರಗಿ : ಅಂತರಂಗದೊಳಗಿನ ಭಾವನೆಗಳು ಬರವಣಿಗೆಯಲ್ಲಿ ಅಥವಾ ವೇದಿಕೆಯಲ್ಲಿ ಬಹಿರಂಗಪಡಿಸುವ ರಂಗಭೂಮಿಯ ವಿಶೇಷ ಕಲೆಯೇ ನಾಟಕ ಎಂದು ಟೆಂಗಳಿ ಅಣವೀರಯ್ಯ ಬಿ.ಮಠಪತಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪ್ರಶಾಂತ ಬಿ. ನಗರದಲ್ಲಿ ಟೆಂಗಳಿ ಅಂಡಗಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬದುಕೇ ರಂಗಭೂಮಿ. ಜೊತೆಗಿದ್ದವರೆಲ್ಲ ಸಹ ಕಲಾವಿದರು. ನಟಿಸಿದಾಗಲೇ ಬದುಕು ರಂಗಾಗುವುದು ನಾಟಕವು ಒಂದು ಆಕರ್ಷಕ ಸಾಹಿತ್ಯ ಪ್ರಕಾರವಾಗಿದೆ ಎಂದರು.

ರೇಖಾ ಅಂಡಗಿ ಸ್ವಾಗತಿಸಿದರು. ಗುಂಡುಚಾರ್ಯ ನರಿಬೋಳಿ ವಂದಿಸಿದರು. ರಂಗಭೂಮಿ ಕಲಾವಿದರಾದ ಪದ್ಮನಾಭಾಚಾರ್ಯ ಬುರಲಿ, ವಿಜಯಕುಮಾರ ದೇವನಹಳ್ಳಿ, ಮುದ್ದೇಶ ಕುಲಕರ್ಣಿ, ಗುಂಡಾಚಾರ್ಯ ಜೋಶಿ, ಎನ್.ಅಗ್ನಿಹೋತ್ರಿ, ಗೋವಿಂದರಾವ ಕುಲಕರ್ಣಿ, ಗುರುರಾಜ ಭಂಕೂರ, ಶ್ರೀನಿವಾಸಚಾರ್ಯ ಬುರಲಿ, ಉದಯಚಾರ್ಯ ಬಡಜೇವರ್ಗಿ, ಸುರೇಶ ಆತ್ಮಕೂರ, ಡಿ.ವಿ. ಕುಲಕರ್ಣಿ, ಚಂದ್ರಕಲಾಬಾಯಿ ಕುಸನೂರ, ಅರ್ಚನಾ ಭಂಕೂರ, ಅಪ್ಪಾರಾವ ಪಾಟೀಲ ಹಳೆ ಶಹಾಬಾದ, ಬಾಬುರಾವ ದೇಶಮುಖ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News