ಕಲಬುರಗಿ | ಕುರುಬಗೊಂಡ ಸಮಾಜದ ಸಾಧಕರ ಹೆಸರು ನೋಂದಾಯಿಸಲು ಮನವಿ

ಗುರುನಾಥ ಎಸ್.ಪೂಜಾರಿ
ಕಲಬುರಗಿ : ಜಿಲ್ಲಾ ಕುರುಬಗೊಂಡ ಸಂಘದ ಅಡಿಯಲ್ಲಿರುವ ಕುರುಬಗೊಂಡ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರಿಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾದನೆಯ ಗೈದಿರುವ ಸಮುದಾಯದವರು ಜಿಲ್ಲೆಯಲ್ಲಿ ಅನುದಾನಿತ/ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರುಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದ್ದು, ಹೆಸರು ನೊಂದಾಯಿಸಿಕೊಳ್ಳಲು ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘ ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ ಗುರುನಾಥ ಎಸ್. ಪೂಜಾರಿ ಮನವಿ ಮಾಡಿದ್ದಾರೆ.
ಪ್ರಶಾಂತ ನಗರದ ಬಾಲಕರ ವಸತಿ ನಿಲಯದಲ್ಲಿ ಎ.6 ರಂದು 11 ಗಂಟೆಗೆ ಸಮಾಜದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಜಿಲ್ಲೆಯ ಶಿಕ್ಷಣ ಸಂಸ್ಥೆಯವರು / ಮಹಿಳಾ ಸಾಧಕರು ಎಪ್ರಿಲ್ 3 ರ ಒಳಗಾಗಿ ಯಲ್ಲಾಲಿಂಗ ಬಬಲಾದಕರ್ ಮೊ. ನಂ: 9731422567, ಮಹೇಶ ಧರಿ ಮೊ.ನಂ: 9880617118, ವಿಜಯಲಕ್ಷ್ಮೀ ಮುಗಳಿ ಮೊ.ನಂ: 9900541825, ರೇವಣಸಿದ್ದಪ್ಪ ತೆಲ್ಲೂರ ಮೊ.ನಂ: 9845138121, ರವಿಗೊಂಡ ಕಟ್ಟಿಮನಿ ಮೊ. ನಂ: 9972320388 ಇವರನ್ನು ಸಂಪರ್ಕಿಸಿ ಸಂಪರ್ಕಿಸಲು ಹೆಸರು ನೋಂದಾಯಿಸಲು ಕೋರಿದ್ದಾರೆ.
ಈ ಸನ್ಮಾನ ಸಮಾರಂಭದಲ್ಲಿ ಮಹಿಳೆಯರು ಮತ್ತು ಯುವಕರು ಹಾಗೂ ಹಿರಿಯರು ಶಿಕ್ಷಣ ಸಂಸ್ಥೆಯವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.