ಸೇಡಂ | ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಯಡಿ ಅರ್ಜಿ ಆಹ್ವಾನ

ಕಲಬುರಗಿ : ಪ್ರಸಕ್ತ 2024-25ನೇ ಸಾಲಿನ ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆ (Prime Minister,s Internship Scheme in Top Companies) ಯಡಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯಲು ಆಸಕ್ತಿಯುಳ್ಳ ಸೇಡಂ ಪಟ್ಟಣದ ಯುವಕ, ಯುವತಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸೇಡಂ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳ ವಯೋಮಿತಿ 21 ರಿಂದ 24 ವರ್ಷದೊಳಗಿರಬೇಕು. ಅಭ್ಯರ್ಥಿಗಳು ಎಸೆಸೆಲ್ಸಿ, ಐಟಿಐ, ಪಿಯುಸಿ, ಬಿ.ಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ, ಬಿ.ಫಾರ್ಮ, ಮತ್ತಿತರ ವಿದ್ಯಾರ್ಹತೆ ಹೊಂದಿರಬೇಕು.
ಉನ್ನತ ಮಟ್ಟದ 500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‍ಶಿಫ್ (Internship) ಮೂಲಕ ಕೌಶಲ್ಯವನ್ನು ವೃದ್ಧಿಸಲು ಯುವಕ/ ಯುವತಿಯರು ಅವಶ್ಯಕ ದಾಖಲಾತಿಯೊಂದಿಗೆ 2025ರ ಮಾ.31 ರೊಳಗಾಗಿ www.pminternship.mca.gov.in/login ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ಅರ್ಹತೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸೇಡಂ ಪುರಸಭೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.