ಕಲಬುರಗಿ | ಒಳ ಮೀಸಲಾತಿ ಜಾರಿಯಾದರೆ ಹೋರಾಟ : ಕನಕಪ್ಪ ದಂಡಗುಲೆ

ಎಚ್.ದಂಡಗುಲೆ
ಕಲಬುರಗಿ : ಎನ್.ನಾಗಮೋಹನದಾಸ್ ಅವರ ಆಯೋಗದ ಮಧ್ಯಂತರ ಸಲ್ಲಿಕೆಯ ವರದಿಯನ್ನು ಜಾರಿಗೊಳಿಸದೆ ತಿರಸ್ಕರಿಸಬೇಕು. ಈ ಕುರಿತು ಪರಿಪೂರ್ಣ ವರದಿಯನ್ನು ತರಿಸಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಎದುರಿಸಬೇಕಾಗುತ್ತದೆ ಎಂದು ಭೂವಿ ಸಮಾಜದ ಆಳಂದ ತಾಲೂಕು ನಿರ್ದೇಶಕ ಕನಕಪ್ಪ ಎಚ್.ದಂಡಗುಲೆ ಅವರು ಇಂದಿಲ್ಲಿ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ಆಳಂದ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಎಸ್‌ಸಿ ಒಳ ಮೀಸಲಾತಿ ಜಾರಿಯಾದರೆ ರಾಜ್ಯದಾದ್ಯಂತ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಂಚಕೊರಮ, ಭೂವಿ, ಬಂಜಾರ ಈ ನಾಲ್ಕು ಸಮುದಾಯದ ಜನರಿಗೆ ಒಳ ಮೀಸಲಾತಿ ಜಾರಿಯಾದರೆ ಅನ್ಯಾಯವಾಗುತ್ತದೆ. ಒಂದೊಮ್ಮೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸಿದರೆ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತಿತರ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಒಳ ಮೀಸಲಾತಿ ತರಾತುರಿಯಲ್ಲಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಇಂದು ಎನ್.ನಾಗಮೋಹನ್ದಾಸ್ ಆಯೋಗವು ಸಲ್ಲಿಸಿದ ಮಧ್ಯಂತರ ವರದಿಯನ್ನು ಸಿಎಂ ಸಿದ್ಧರಾಮಯ್ಯನವರು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಜನರು ತಮಗೆ ಅಧಿಕಾರ ಕೊಟ್ಟಿದ್ದು, ಎಲ್ಲ ಸಮುದಾಯಗಳನ್ನು ಸಮಾನತೆಯಾಗಿ ನೋಡಿಕೊಂಡು ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಬೇಕು. ಒಂದು ವೇಳೆ ಈ ಒಳಮೀಸಲಾತಿ ಯತ್ತಾವತ್ತಾಗಿ ಮುಂದುವರೆಸದೆ ಜಾರಿಗೆ ತಂದರೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.