ಕಲಬುರಗಿ | ಬುದ್ಧ, ಬಸವ, ಡಾ.ಅಂಬೇಡ್ಕರವರ ತತ್ವಗಳನ್ನು ಅಳವಡಿಸಿಕೊಳ್ಳಿ; ಚಂದ್ರಶೇಖರ್ ಜಿ.

Update: 2025-03-27 20:21 IST
Photo of Program
  • whatsapp icon

ಕಲಬುರಗಿ : ನಗರದ ರಾಜಾಪುರ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಆವರಣದಲ್ಲಿ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾಯೋಜನ ಕೋಶ ಇವರುಗಳ ಸಂಯುಕ್ತ ಆಶ್ರಯದಲ್ಲಿ 2024 -25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವ-ಆರ್ಥಿಕ ಘಟಕ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಎ ಮತ್ತು ಬಿ ಮತ್ತು ಪಿಜಿ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಈ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರದ ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ಜಿ. ಮಾತನಾಡಿ, ವಿದ್ಯಾರ್ಥಿಗಳು ಬುದ್ಧ, ಬಸವ, ಡಾ.ಅಂಬೇಡ್ಕರವರ ತತ್ವಗಳನ್ನು ಅಳವಡಿಸಿಕೊಂಡು ಮುಂದೆ ಬರಲು ಪ್ರಯತ್ನಿಸಬೇಕು. ಸಮಯವು ಸಂಪತ್ತಾಗಬೇಕು ಅಂದಾಗ ಮಾತ್ರ ನಮ್ಮ ಜೀವನ ಉಜ್ವಲಗೊಳ್ಳುತ್ತದೆ ಎಂದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗ ಕುಲಸಚಿವರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಪ್ರೊ.ಎನ್.ಜಿ.ಕಣ್ಣೂರ ಅವರು ಮಾತನಾಡಿ, ಇಂದಿನ ವಿಧ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕೆಂದು ಕರೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತರಾದ ಸೂರ್ಯಕಾಂತ ಜಮಾದಾರ ಅವರು, ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಸಾಧನೆ ಮಾಡಬೇಕು ಎಂದರು. ಕಾಲೇಜಿನ ಸಹಪ್ರಾಧ್ಯಾಪಕರು ಹಾಗೂ ಐಕ್ಯೂ.ಎ.ಸಿ ಯ ಸಂಯೋಜಕರಾದ ಡಾ.ರಾಜಶೇಖರ ಮಡಿವಾಳ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಯು.ಜಿ ಕಲಾ ವಿಭಾಗದ ಡೀನರವರಾದ ಡಾ. ವಿಜಯಕುಮಾರ ಸಾಲಿಮನಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪ್ರಬಂಧ ಸ್ವರ್ಧೆಯಲ್ಲಿ ವಿಜೇತರಿಗೆ ಅತಿಥಿ ಗಣ್ಯರಿಂದ ಪುಸ್ತಕ ಹಾಗೂ ಬಹುಮಾನ ವಿತರಿಸಲಾಯಿತು.

ಡಾ.ರಾಜಕುಮಾರ್ ಸಲಗರ, ಡಾ.ದವಲಪ್ಪ ಬಿ.ಹೆಚ್, ಎನ್ ಎಸ್ ಎಸ್ ಅಧಿಕಾರಿಗಳಾದ ಡಾ.ನಾಗಪ್ಪ ಟಿ ಗೋಗಿ, ಡಾ.ಶಿವಲಿಂಗಪ್ಪ ಪಾಟೀಲ, ಡಾ.ಬಸಂತ ಸಾಗರ, ಡಾ.ಬಲಭೀಮ ಸಾಂಗ್ಲಿ, ಡಾ.ರವಿ ಬೌದ್ದೆ ಹಾಗೂ ಶಿಬಿರಾಧಿಕಾರಿಗಳಾದ ಡಾ.ಶ್ರೀಮಂತ ಹೋಳ್ಕರ್, ಡಾ.ವಿಶ್ವನಾಥ ಬೆಣ್ಣೂರ, ಡಾ.ರೇಖಾ ಅಣ್ಣಿಗೇರಿ, ಡಾ.ಸುರೇಶ ಮಾಳೆಗಾಂವ, ಡಾ.ಮೀನಾಕ್ಷಿ ಹುಗ್ಗಿ, ಪ್ರೊ.ಮೇರಿ ಮೈಥುಸ್ ಹಾಗೂ ಪತ್ರಾಂಕಿತ ವ್ಯವಸ್ಥಾಪಕರಾದ ಅಜಯ್ ಸಿಂಗ್ ಅವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರ ಜ್ಞಾನಪೀಠ ಕವಿಗಳ ಎಲ್ಲಾ ತಂಡಗಳು ನೃತ್ಯ ನಾಟಕ ಮನರಂಜನೆ ಕಾರ್ಯಕ್ರಮಗಳಲ್ಲಿ ತೊಡಗಿದ್ದರು. ಕಾಲೇಜಿನ ವಿದ್ಯಾರ್ಥಿ ಈಶ್ವರ ಸ್ವಾಗತಿಸಿದರು. ಸಂಗೀತಾರವರು ವರದಿ ವಚನವನ್ನು ಮಂಡಿಸಿದರು. ನವೀನ್ ಕುಮಾರ ಹಾಗೂ ಕರ್ಣ ಚವ್ಹಾಣರವರು ಅನಿಸಿಕೆ ವ್ಯಕ್ತಪಡಿಸಿದರು. ರಂಜಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವು ನೆರವೇರಿತು.

ಕಾಲೇಜಿನ ಬೋಧಕ ಹಾಗೂ ಬೋಧೇತರ ಸಿಬ್ಬಂದಿ ವರ್ಗದವರು ಹಾಗೂ ಶಿಭಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News