ರಾಯಚೂರು | ಗುತ್ತಿಗೆ ಸಂಸ್ಥೆಯ ತಾರತಮ್ಯ ಖಂಡಿಸಿ ವೈಟಿಪಿಎಸ್ ನೌಕರರಿಂದ‌ ಪ್ರತಿಭಟನೆ

Update: 2025-03-20 22:53 IST
Photo of Protest
  • whatsapp icon

ರಾಯಚೂರು : ವೈಟಿಪಿಎಸ್ ಗುತ್ತಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗುರುವಾರ ಇಲ್ಲಿನ ಹೊರ ವಲಯದ ಯರಮರಸ್ ಬಳಿ ವೈಟಿಪಿಎಸ್ ನೌಕರರು ಕೆಲಸಕ್ಕೆ ಗೈರಾಗಿ ವೈಟಿಪಿಎಸ್ ಆವರಣದ ಮುಂದೆ ಪ್ರತಿಭಟನೆ ನಡೆಸಿದರು.

ಸಂಬಳ ಹೆಚ್ಚಳ, ಭತ್ಯೆ ಸೇರಿ ಪವರ್ ಮೇಕ್ ಕಂಪನಿಯ ತಾರತಮ್ಯ ನೀತಿ ಖಂಡಿಸಿ ವೈಟಿಪಿಎಸ್ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಪವರ್ ಮೇಕ್ ಕಂಪನಿಯಿಂದ ಹೊರ ರಾಜ್ಯದ ಕಿರಿಯ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಲಾಗುತ್ತಿದೆ. ಸ್ಥಳೀಯ ಹಿರಿಯ ಕಾರ್ಮಿಕರಿಗೆ ಕಡಿಮೆ ವೇತನ ನೀಡುತ್ತಿದ್ದು ಅದು ಕೂಡ ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದರು.

ವಾರ್ಷಿಕ ಭತ್ತೆ ಕೂಡ ನೀಡುತ್ತಿಲ್ಲ, ಇನ್ಕ್ರಿಮೆಂಟ್ ಸೇರಿ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿದರು.

ವೈಟಿಪಿಎಸ್ ಕೇಂದ್ರದ ಒಳಗೆ ಕೆಲಸ ಮಾಡುವ ಕಾರ್ಮಿಕರಿಗೆ ಸೌಲಭ್ಯಗಳ ಕೊರತೆ, ಕೆಲಸ ಮಾಡುವ ಕಾರ್ಮಿಕರಿಗೆ ಊಟದ ಸಮಯದಲ್ಲಿ ಕುಳಿತು ಊಟ ಮಾಡಲು ಸರಿಯಾದ ಸ್ಥಳಾವಕಾಶ ಇಲ್ಲ, ಊಟ ಮಾಡುವ ಸ್ಥಳ ಧೂಳ್ಮಯವಾಗಿದ್ದು, ಕಾರ್ಮಿಕರು ಅದೇ ಧೂಳಿನಲ್ಲಿ ಊಟ ಮಾಡುವ ಪರಿಸ್ಥಿತಿ ಇದೆ. ಸರಿಯಾದ ಸೌಲಭ್ಯ, ವೇತನ ಬಡ್ತಿಗೆ ಆಗ್ರಹಿಸಿ ಪವರ್ ಮೇಕ್ ಕಂಪನಿ ವಿರುದ್ಧ ಧಿಕ್ಕಾರ ಕೂಗಿ ನೂರಾರು ಕಾರ್ಮಿಕರಿಂದ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News