ಕಲಬುರಗಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ; ಅಪಾರ ಹಾನಿ
Update: 2025-03-20 19:35 IST

ಕಲಬುರಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ ಅಲ್ಲಿನ ಬಟ್ಟೆ, ದವಸಧಾನ್ಯ, ಚಿನ್ನ ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾದ ಘಟನೆ ಕಮಲಾಪೂರ ತಾಲೂಕಿನ ದೇವಲು ನಾಯಕ್ ತಾಂಡಾದಲ್ಲಿ ನಡೆದಿದೆ.
ಅದೇ ತಾಂಡಾದ ನಿವಾಸಿ ಕಮಲಾಬಾಯಿ ಬೋಜು ರಾಥೋಡ್ ಎಂಬುವರ ಮನೆ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿದ್ದ ಅಲಮಾರಿ, ಫ್ರಿಜ್, ದಿನ ಬಳಕೆ ವಸ್ತುಗಳು, ಬಟ್ಟೆ, ದವಸ ಧಾನ್ಯಗಳು, ದಾಖಲಾತಿಗಳು ಹೀಗೆ ಮನೆಯಲ್ಲಿನ ಬಹುತೇಖ ವಸ್ತುಗಳು ಬೆಂಕಿಗಾಹುತಿ ಆಗಿವೆ. ಅವಘಡದಲ್ಲಿ 20 ಗ್ರಾಂ ಚಿನ್ನಾಭರಣ, 40 ತೊಲಿ ಬೆಳ್ಳಿ ಆಭರಣ, ಅಲಮಾರಿಯಲ್ಲಿದ್ದ 80 ಸಾವಿರ ನಗದು ಸೇರಿ ಒಟ್ಟು ಅಂದಾಜು ನಾಲ್ಕು ಲಕ್ಷ ರೂ. ಹಾನಿಯಾದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ಅವಘಡದಿಂದ ಕುಟುಂಬ ಅಕ್ಷರ ಸಹ ಬೀದಿಗೆ ಬಿದ್ದಿದ್ದು, ಸರ್ಕಾರದಿಂದ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.