ಕಲಬುರಗಿ | ಜಗಜೀವನರಾಂ ಅವರ 118ನೇ ಜಯಂತಿ : ಮಾ.25 ರಂದು ಪೂರ್ವಭಾವಿ ಸಭೆ

Update: 2025-03-20 21:31 IST
ಕಲಬುರಗಿ | ಜಗಜೀವನರಾಂ ಅವರ 118ನೇ ಜಯಂತಿ : ಮಾ.25 ರಂದು ಪೂರ್ವಭಾವಿ ಸಭೆ
  • whatsapp icon

ಕಲಬುರಗಿ: ಏಪ್ರಿಲ್ 5 ರಂದು ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ:ಬಾಬು ಜಗಜೀವನರಾಂರವರ 118ನೇ ಜಯಂತಿ ಹಾಗೂ ಏ.14 ರಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತಿಯನ್ನು ಆಚರಿಸುವ ಸಂಬಂಧ ಇದೇ ಮಾರ್ಚ್ 25 ರಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರು ತಿಳಿಸಿದ್ದಾರೆ.

ಈ ಸಭೆಗೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು, ಭಾರತದ ಮಾಜಿ ಉಪ ಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ:ಬಾಬು ಜಗಜೀವನರಾಂ ರವರ ಹಾಗೂ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ:ಬಿ.ಆರ್.ಅಂಬೇಡ್ಕರ್ ರವರ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದರಿ ಸಭೆಗೆ ಹಾಜರಾಗಲು ಮತ್ತು ಸಲಹೆಗಳನ್ನು ನೀಡಬೇಕೆಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News