ಕಲಬುರಗಿ | ಸಾಮಾಜಿಕ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ರಂಗಭೂಮಿ ಪ್ರಮುಖ ಪಾತ್ರವಹಿಸಿದೆ : ಬಿ.ಆರ್.ಪಾಟೀಲ್

Update: 2025-03-27 21:54 IST
ಕಲಬುರಗಿ | ಸಾಮಾಜಿಕ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ರಂಗಭೂಮಿ ಪ್ರಮುಖ ಪಾತ್ರವಹಿಸಿದೆ : ಬಿ.ಆರ್.ಪಾಟೀಲ್
  • whatsapp icon

ಕಲಬುರಗಿ : ರಂಗಭೂಮಿಯು ಸಾಮಾಜಿಕ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಲಾವಿದರನ್ನು ಸನಿಹದಿಂದ ನೋಡಿ ಕಣ್ತುಂಬಿಕೊಳ್ಳುವ ಅದ್ಭುತ ಅವಕಾಶ ರಂಗಭೂಮಿ ಒದಗಿಸುತ್ತದೆ. ಬಹುಪಾಲು ಹಿಂದಿನ ಚಿತ್ರತಾರೆಯರು ರಂಗಭೂಮಿಯಿಂದಲೇ ಬೆಳೆದವರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್.ಪಾಟೀಲ್‌ ಹೇಳಿದ್ದಾರೆ.

ನಗರದ ಪತ್ರಕರ್ತರ ಸಂಸ್ಕೃತಿಕ ಭವನದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಪಾಳಾದ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಂಗಭೂಮಿ ಸಾಧಕರಿಗೆ ವಿಶ್ವ ರಂಗ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಕೆ.ಗಿರಿಮಲ್ಲ ಅವರು ರಂಗಭೂಮಿಯ ಇತಿಹಾಸ ಹಾಗೂ ಅದರ ಪ್ರಭಾವವನ್ನು ಸ್ವಾರಸ್ಯಕರವಾಗಿ ಉಪನ್ಯಾಸ ನೀಡಿದರು. ನಂತರ ಕಲಾವಿದರು ರಂಗಗೀತೆಗಳನ್ನು ಹಾಡಿದರು.

ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿ.ಎಲ್.ಶೇಖ್, ಹಿರಿಯ ಪತ್ರಾಗಾರ ಇಲಾಖೆಯ ನಿರ್ದೇಶಕರಾದ ಡಾ.ವೀರಶೆಟ್ಟಿ ಗಾರಂಪಳ್ಳಿ, ರಂಗಕರ್ಮಿ ಶಾಂತಾ ಭೀಮಸೇನ್ ರಾವ್, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ರಂಗ ನಿರ್ದೇಶಕ ಡಾ.ವಿಶ್ವರಾಜ ಪಾಟೀಲ್, ರಂಗ ಸಂಘಟಕ ಡಾ.ಕೆ.ಲಿಂಗಪ್ಪ ಇವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್,ಅಧ್ಯಕ್ಷರಾದ ಶರಣಗೌಡ ಪಾಟೀಲ ಪಾಳಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಅಮರ ಪ್ರಿಯ ಹಿರೇಮಠ, ಅಶೋಕ್ ತೋಟ್ನಳ್ಳಿ, ಮಲ್ಲಣರಾಕ, ಲವಕುಶ ಠೇಕೂರ, ರಂಗಕರ್ಮಿ ಪ್ರಮೀಳಾ ಪಾಟೀಲ, ನಾನಾಗೌಡ, ಪರಮೇಶ್ವರ ದಂಡಿನ, ಸಂಗಮೇಶ ಪಾಳಾ, ಡಾ.ಶೈಲ ಬಿರಾದಾರ, ಜಗದೇವಪ್ಪ ಹತ್ತರಕಿ, ಸಿದ್ದಪ್ಪಾ ತಳ್ಳೊಳ್ಳಿ, ನಾಗರಾಜ ಗಂದಿಗುಡಿ ಉಪಸ್ಥಿತರಿದ್ದರು.

ರಂಗ ನಿರ್ದೇಶಕರಾದ ಸಿದ್ರಾಮ ರಾಜಮಾನೆ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಅಂಬಾರಾಯ ಕೋಣೆ ಸ್ವಾಗತಿಸಿದರು. ಜಲೀಲ್ ಪಟೇಲ್ ಅವರು ನಿರೂಪಿಸಿದರು. ಬಸವಂತರಾಯ ಕೋಳಕೂರ ವಂದಿಸಿದರು.

ಪುರಸ್ಕೃತ ಕಲಾವಿದರು :

ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಸೇಡಂ, ಮಲ್ಲಿನಾಥ ಆಲೇಗಾಂವ ಮಾಶಾಳ ಅಫಜಲಪುರ, ಚಂದ್ರಶೇಖರ ಲಗಶೆಟ್ಟಿ, ಚಿಂಚೋಳಿ, ಬಿ.ಎಸ್ ಪ್ಯಾಟಿಮಠ ಕಾಳಗಿ, ರಾಮಕೃಷ್ಣ ಮನೋಹರ ಕರದಳ್ಳಿ ಚಿತ್ತಾಪೂರ, ಶರಣಪ್ಪ ರಾಮಯ್ಯ ನರಬೋಳಿ, ಜೇವರ್ಗಿ , ಬಸವರಾಜ್ ಗುರುಶಾಂತಪ್ಪ ಪೊಲೀಸ್ ಪಾಟೀಲ್ ನಂದೂರ್ (ಬಿ), ಶಾಂತಗೌಡ ಶಿವಶಂಕರ ಗೌಡ ಹಂಚಿನಾಳ (ನಿವೃತ್ತ ಶಿಕ್ಷಕರು), ಚಾಂದ್ ಪಾಷಾ ಇಮಾಮ್ ಸಾಬ್ ಮುಲ್ಲಾ ಶಿವಪುರ, ಯಡ್ರಾಮಿ, ರೇವಣರಾಜ್ ಎಸ್ ಮಾಲಿ ಪಾಟೀಲ್ ನಂದೂರ (ಕೆ ), ಶರಣಬಸಪ್ಪ ಎಸ್ ಮಡಿವಾಳ ನಿಂಬರ್ಗಿ, ಶರಣಮ್ಮ ಶಾಮರಾಯ ಭಜಂತ್ರಿ ಕಾಳಗಿ ಅವರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News