ಕಲಬುರಗಿ | ಆಳಂದದಲ್ಲಿ ಇಫ್ತಾರ್ ಕೂಟ ಆಯೋಜನೆ

ಕಲಬುರಗಿ : ರಮಝಾನ್ ಪವಿತ್ರ ಸಂದರ್ಭದ ಅನುಸಂಧಾನದಲ್ಲಿ ಪಟ್ಟಣದ ಹತ್ತಾನಗಲಿ ಬಳಿಯ ನೌಕಾಡಗಲ್ಲಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾವೈಕ್ಯತೆಯ ಸೌರಭವನ್ನು ಮೆರೆದ ವಿಶೇಷ ಇಫ್ತಾರ್ ಕೂಟ ನಡೆಯಿತು.
13ನೇ ವರ್ಷದ ಸೌಹಾರ್ದ ಕೂಟವನ್ನು ಆಳಂದ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಮುಖಂಡ ಹಾಗೂ ಗುತ್ತಿಗೆದಾರರಾದ ರೇವಣಸಿದ್ಧಪ್ಪ ಎಸ್.ನಾಗೂರೆ ಅವರ ನೇತೃತ್ವದಲ್ಲಿ ಭಾನುವಾರ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಹಾಗೂ ವಿವಿಧ ಸಮುದಾಯದ ಮುಖಂಡರು ಭೋಜನವನ್ನು ಹಂಚಿಕೊಂಡು ಸೌಹಾರ್ದತೆಯ ಸಂಕೇತವಾಗಿ ಪರಸ್ಪರ ಸ್ನೇಹವನ್ನು ಘಟ್ಟಿಸಿದರು. ಈ ಸದುದ್ದೇಶಿತ ಕೂಟದಲ್ಲಿ ಲಿಂಗಾಯತ, ದಲಿತ, ಮುಸ್ಲಿಂ ಬಾಂಧವರು ಸಮಾನವಾಗಿ ಭಾಗವಹಿಸಿ ಪರಸ್ಪರ ಗೌರವ ಪ್ರದರ್ಶಿಸಿದರು. ರೇವಣಸಿದ್ಧಪ್ಪ ನಾಗೂರೆ ಅವರು ಸಮುದಾಯ ಮುಖಂಡರನ್ನು ಸನ್ಮಾನಿಸಿ, ಬಾಂಧವ್ಯ ಮತ್ತು ಭಾವೈಕ್ಯತೆ ಎಂಬ ಸಂದೇಶವನ್ನು ಸಾರಿದರು. ಈ ಸಂದರ್ಭದಲ್ಲಿ ಸಮುದಾಯ ಮುಖಂಡರು ಸೇರಿ ಆಲೈಕಟ್ಟೆಯ ಸಮಾದಿಗೆ ಚಾದರ ಹೊದಿಸಿ ಪುಷ್ಫಾರ್ಚನೆ ನಡೆಸಿ ಪ್ರಾರ್ಥಿಸಿದರು.
ರೇವಣಸಿದ್ಧಪ್ಪ ನಾಗೂರೆ ಅವರೊಂದಿಗೆ ಮಲ್ಲಪ್ಪ ಹತ್ತರಕಿ, ವೀರಶೈವ ಲಿಂಗಾಯತ್ ಮಹಾಸಭಾ ಉಪಾಧ್ಯಕ್ಷ ಶ್ರೀಶೈಲ ಖಜೂರಿ, ಶಿವುಪುತ್ರ ಹತ್ತಿ, ಪಿಕೆಪಿ ಮಾಜಿ ಅಧ್ಯಕ್ಷ ಶಂಕರರಾವ್ ಹತ್ತಿ, ಮುಸ್ಲಿಂ ಧಾರ್ಮಿಕ ಮುಖಂಡ ಹಿರಿಯ ಪಾಶಾ ಗುತ್ತೇದಾರ, ಲಾಡ್ಲೆಮಶಾಕ ದರ್ಗಾ ಕಮೀಟಿ ಅಧ್ಯಕ್ಷ ಆಸೀಫ್ ಅನ್ಸಾರಿ, ಬ್ದುಲ ಸಲಾಂ ಸಗರಿ, ಬಡಾವಣೆಯ ಮುಖಂಡ ಮುನ್ನಾ ಅಡಿಗೆ, ಹಾರುನ ನೌಕಾಡಿ, ಖಲೀಂ, ಮೌಲಾಲಿ ಖಾದರ, ಪುರಸಭೆ ಸದಸ್ಯ ಲಕ್ಷ್ಮಣ ಝಳಕಿ, ಆಸೀಫ್ ಚೌಸ್, ನ್ಯಾಯವಾದಿ ಸಂಜಯ ನಾಯಕ ನ್ಯಾಯವಾದಿ ಮಹಾದೇವ ಹತ್ತಿ, ಅಲೀಂ, ಅಬ್ದುಲ್ ಸಲಾಂ ಸಗರಿ,ಮಲ್ಲಿಕಾರ್ಜುನ ಬುಕ್ಕೆ, ಶಿವಾನಂದ ನಾಗೂರೆ, ಗುಲಾಂ ಹುಸೇನ್ ಟಪ್ಪೇವಾಲೆ ಸೇರಿದಂತೆ ಮಕ್ಕಳು, ಯುವಕರು ಹಾಗೂ ಹಿರಿಯರು ಪಾಲ್ಗೊಂಡು ಸೌಹಾರ್ದತೆಯ ಸಂದೇಶವನ್ನರಿಸಿ ಆದರ್ಶವನ್ನು ಮೆರೆದರು.