ಕಲಬುರಗಿ | 'ಅಟಲ್ ವಿರಾಸತ್ ಜಿಲ್ಲಾ ಮಟ್ಟದ ಸಮಾವೇಶ'

ಕಲಬುರಗಿ : ಐದು ದಶಕಗಳ ಕಾಲ ರಾಷ್ಟ್ರೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಂಘಟನಾತ್ಮಕವಾಗಿ ದೇಶದಾದ್ಯಂತ ಪಕ್ಷವನ್ನು ಗಟ್ಟಿಗೊಳಿಸಿರುವ ಅಟಲ್ ಬಿಹಾರಿ ವಾಜಪೇಯಿ ವ್ಯಕ್ತಿಯಲ್ಲ. ಬದಲಾಗಿ ಸಾವಿರಾರು ಕಾರ್ಯಕರ್ತರಿಗೆ ಅವರೊಂದು ದೊಡ್ಡ ಶಕ್ತಿಯಾಗಿದ್ದರು ಎಂದು ಅಟಲ್ ಜೀ ಶತಮಾನೋತ್ಸವದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಗುರುವಾರ ಸಂಜೆ ಭಾರತೀಯ ಜನತಾ ಪಕ್ಷ ಕಲಬುರಗಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ 'ಅಟಲ್ ವಿರಾಸತ್ ಜಿಲ್ಲಾ ಮಟ್ಟದ ಸಮಾವೇಶ'ದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು.
ದೇಶಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡಿ, ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಒಂದಾಗಿಸುವ ಮೂಲಕ ರಾಷ್ಟ್ರಕ್ಕಾಗಿ,ರಾಷ್ಟ್ರದ ಉನ್ನತಿಗೆ ಅವರೊಂದಿಗೆ ವ್ಯಕ್ತಿಯಾಗದೇ ದೊಡ್ಡ ಶಕ್ತಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಸಂಜಯ್ ಮಿಸಕಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಅಶೋಕ್ ಬಗಲಿ,ಮಾಜಿ ಸಂಸದ ಡಾ.ಉಮೇಶ್ ಜಾಧವ್, ಮಾಜಿ ಶಾಸಕ ಸುಭಾಷ ಗುತ್ತೇದಾರ್, ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣಾ ಮ್ಯಾಕೇರಿ, ಕಾರ್ಯದರ್ಶಿ ಉಮೇಶ್ ಪಾಟೀಲ್, ಮಹಾದೇವ ಬೆಳಮಗಿ, ಶಿವಯೋಗಿ ನಾಗೇನಹಳ್ಳಿ,ಚಂದಮ್ಮ ಪಾಟೀಲ್, ಮುಖಂಡರಾದ ಶರಣಪ್ಪ ತಳವಾರ,ದಯಾಘನ ಧಾರವಾಡಕರ್, ಅರವಿಂದ್ ನವಲಿ, ಲಿಂಗರಾಜ ಬಿರಾದಾರ, ಅಂಬಾರಾಯ ಅಷ್ಟಗಿ,ಸಚಿನ ಕಡಗಂಚಿ, ಬಸವರಾಜ ಬೆಣ್ಣೂರ, ಶಶಿಕಲಾ ಟೆಂಗಳಿ, ಭಾಗೀರತಿ ಗುನ್ನಾಪುರ, ಸಂತೋಷ ಹಾದಿಮನಿ, ವಿಜಯಲಕ್ಷ್ಮಿ ಗೊಬ್ಬುರಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.