ಕಲಬುರಗಿ | ಮಗುವಿನ ಕಲಿಕೆಗೆ ರಂಗೋತ್ಸವ ಕಾರ್ಯಕ್ರಮ ಸಹಕಾರಿ : ಶರಣಬಸಪ್ಪ ಧನ್ನಾ

ಕಲಬುರಗಿ: ಮಗುವಿಗೆ ಕಲಿಕೆಯನ್ನು ಆನಂದದಾಯಕ ಪ್ರಕ್ರಿಯೆಯನ್ನಾಗಿ ಮಾಡುವಲ್ಲಿ ರಂಗೋತ್ಸವ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಭಂಕೂರ ಗ್ರಾಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ ಹೇಳಿದರು.
ಅವರು ಶಹಾಬಾದ ತಾಲೂಕಿನ ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಹುದಗಿರುವ ಪ್ರತಿಭೆಯನ್ನು ಹೊರಹಾಕಲು ಸಾಧ್ಯ. ಅಲ್ಲದೇ ಮಗು ತನ್ನ ಆಸಕ್ತಿಯನ್ನು ಮತ್ತು ಅಭಿರುಚಿಯನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆಯನ್ನು ರಂಗೋತ್ಸವ ಕಾರ್ಯಕ್ರಮ ನೀಡುತ್ತದೆ ಎಂದು ಹೇಳಿದರು.
ಭಂಕೂರ ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶದ ವಿಭಿನ್ನ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿರುಚಿ ಮೂಡಿಸುವ ಸಲುವಾಗಿ ಆಯೋಜಿಸಿರುವ ರಂಗೋತ್ಸವ ಕಾರ್ಯಕ್ರಮವು ಒಂದು ಉತ್ತಮ ಪರಿಕಲ್ಪನೆಯಾಗಿದೆ. ರಂಗೋತ್ಸವದ ಸಲುವಾಗಿ ಯಾವೆಲ್ಲ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಬೇಕು ಅದನ್ನು ಮಾಡುವ ಮೂಲಕ ಮಕ್ಕಳಲ್ಲಿ ವಿಶೇಚ ಕಲೆಯನ್ನು ಉತ್ತೆಜಿಸುವ ಕೆಲಸ ನಡೆಯಲಿ. ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ನಮ್ಮ ಗ್ರಾಮೀಣ ಜಾನಪದ ಕಲೆಯನ್ನು ಉಳಿಸುವಂತ ಕೆಲಸ ಶಾಲಾ ಶಿಕ್ಷಕರಿಂದಾಗಲಿ ಎಂದರು.
ಗ್ರಾಪಂ ಸದಸ್ಯ ಜಾಕೀರ ಹುಸೇನ್, ಸಿಆರ್‍ಪಿ ಮರೆಪ್ಪ ಭಜಂತ್ರಿ, ಭೀಮರಾಯ, ನಾಗೇಂದ್ರ ಗಂಗಣ್ಣ, ಶಾಲೆಯ ಮುಖ್ಯಗುರು ಶಂಕರ ಜಾಧವ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶಶಿಕಲಾ.ಕೆ, ವಿಮಲಾ.ಕೆ, ದತ್ತಪ್ಪ ಕೋಟನೂರ್ ಅನೀಲಕುಮಾರ ಕುಮಸಗಿ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಬಹುಮಾನ ವಿತರಿಸಲಾಯಿತು. ಶಾಂತಮಲ್ಲ ಶಿವಭೋ ನಿರೂಪಿಸಿ, ಪ್ರಾರ್ಥಿಸಿದರು. ರಾಣಪ್ಪ ಸಂಗನ್ ಸ್ವಾಗತಿಸಿದರು, ಎಮ್.ಡಿ.ಜಕಾತೆ ಪ್ರಾಸ್ತಾವಿಕ ನುಡಿದರು. ಸೀತಮ್ಮ. ಎನ್ ವಾರ್ಷಿಕ ವರದಿ ವಾಚಿಸಿದರು, ವಿಷ್ಣುತೀರ್ಥ ಆಲೂರ ವಂದಿಸಿದರು.