ಕಲಬುರಗಿ | ಕುರಿಕೋಟಾ ಬ್ರಿಡ್ಜ್ ಗೆ ಹಾರಿ ಯುವಕ ಆತ್ಮಹತ್ಯೆ; ಮುಂದುವರೆದ ಕಾರ್ಯಾಚರಣೆ

Update: 2025-03-21 19:41 IST
ಕಲಬುರಗಿ | ಕುರಿಕೋಟಾ ಬ್ರಿಡ್ಜ್ ಗೆ ಹಾರಿ ಯುವಕ ಆತ್ಮಹತ್ಯೆ; ಮುಂದುವರೆದ ಕಾರ್ಯಾಚರಣೆ

ಸಮೀರ್

  • whatsapp icon

ಕಲಬುರಗಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ಕುರಿಕೋಟಾ ಬ್ರಿಡ್ಜ್ ಮೇಲಿಂದ ಜಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕಲಬುರಗಿ ನಗರದ ಮಿಲ್ಲತ್ ನಗರ ನಿವಾಸಿ ಎಂಡಿ ಸಮೀರ್ (23) ನದಿಗೆ ಹಾರಿದ ಯುವಕ ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಸಮೀರ್ ಕಲಬುರಗಿಯಿಂದ ಕುರಿಕೋಟಾ ಹಳೆ ಬ್ರಿಡ್ಜ್ ಮೇಲೆ ಬೈಕ್ ನಿಲ್ಲಿಸಿ ನೀರಿನಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಯುವಕ ನಾಪತ್ತೆಯಾಗಿದ್ದು, ಆತನ ಶೋಧಕ್ಕಾಗಿ ಎನ್.ಡಿಆರ್.ಡಿ ತಂಡ ಮಹಾಗಾಂವ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಶುಕ್ರವಾರ ರಾತ್ರಿಯಾಗಿದ್ದರೂ ಮೃತದೇಹ ಪತ್ತೆಯಾಗಿಲ್ಲ. ಮತ್ತೆ ಶನಿವಾರ ಶೋಧ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್ಐ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News