ಕಲಬುರಗಿ | ಸಿಡಿಲು ಬಡಿದು ಮೂರು ಎತ್ತುಗಳು ಸಾವು

Update: 2025-03-22 21:00 IST
ಕಲಬುರಗಿ | ಸಿಡಿಲು ಬಡಿದು ಮೂರು ಎತ್ತುಗಳು ಸಾವು
  • whatsapp icon

ಕಲಬುರಗಿ : ಶುಕ್ರವಾರ ಸುರಿದ ಮಳೆಯಲ್ಲಿ ಸಿಡಿಲು ಬಡಿದು ಜೇವರ್ಗಿ ತಾಲ್ಲೂಕಿನ ಬೇಲೂರ ಗ್ರಾಮದ ವಿಜಯಕುಮಾರ್ ಕರಗಾರ್ ರವರ ಎರಡು ಎತ್ತುಗಳು ಮತ್ತು ಮದರಿ ಗ್ರಾಮದ ಅಕೀಲ್ ಬಾಬಾ ಕೋಮಚೂರ ರವರ ಎತ್ತು ಸಿಡಿಲು ಬಡಿದು ಸಾವನಪ್ಪಿದ ಘಟನೆ ನಡೆದಿವೆ.

ಜೇವರ್ಗಿ ತಾಲೂಕಿನ ಬೇಲೂರ ಮತ್ತು ಮದರಿ ಗ್ರಾಮದಲ್ಲಿ ಒಟ್ಟು ಮೂರು ಎತ್ತುಗಳು ಸಾವನಪ್ಪಿದ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಮತ್ತು ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಜೇವರ್ಗಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಸುರಿದ ಗುಡುಗು ಮಿಂಚು ಸಹಿತ ಭಾರೀ ಮಳೆಗೆ ವಿಜಯಕುಮಾರ್ ಕರಗಾರ್ ಎಂಬುವವರಿಗೆ ಸೇರಿದ ಎರಡು ಎತ್ತುಗಳು ಬಲಿಯಾಗಿವೆ. ಸುಮಾರು 2,50,000 ಲಕ್ಷ ರೂ. ಬೆಲೆ ಬಾಳುವ ಎತ್ತುಗಳನ್ನು ಕಳೆದುಕೊಂಡ ರೈತನಿಗೆ ದಿಕ್ಕು ತೋಚದಂತಾಗಿದೆ. ಸಾಲ ಶೂಲ ಮಾಡಿ ರೈತ ವಿಜಯಕುಮಾರ ಎತ್ತುಗಳನ್ನು ತಂದಿದ್ದನ್ನು, ಅಷ್ಟಲ್ಲದೆ ಎತ್ತುಗಳನ್ನೆ ನಂಬಿ ಬೇರೆಯವರ ಹೊಲ ಗದ್ದೆಗಳನ್ನು ಲೀಜಿಗೆ ಹಾಕಿಕೊಂಡು ವ್ಯವಸಾಯ ಮಾಡುತ್ತಿದ್ದನು. ರೈತನ ಕುಟುಂಬಕ್ಕೆ ಜೀವನೋಪಾಯಕ್ಕೆ ಆಸರೆಯಾದ ಎತ್ತುಗಳನ್ನು ಕಳೆದುಕೊಂಡು ರೈತನ ಕುಟುಂಬವು ಸಂಕಷ್ಟಕ್ಕಿಡಾಗಿದೆ.

ಮದರಿ ಗ್ರಾಮದಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ವಿದ್ಯುತ್‌ ಕಂಬಕ್ಕೆ ವಿದ್ಯುತ್‌ ಹರಿದ ಪರಿಣಾಮ ರೈತ ಅಕೀಲ್ ಬಾಬ ಇವರಿಗೆ ಸೇರಿದ ಜಾನುವಾರು ವಿದ್ಯುತ್ ಅವಘಡದಿಂದಾಗಿ ಸಾವನಪ್ಪಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಎರಡು ಕುಟುಂಬಕ್ಕೆ ಸರಕಾರವು ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸುದ್ದಿಯನ್ನು ತಿಳಿದ ನೆಲೋಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಬೇಲೂರಿಗೆ ಭೇಟಿ ನೀಡಿ ಸ್ವಯಂ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಅದರಂತೆ ಮದರಿ ಗ್ರಾಮಕ್ಕೆ ಜೇವರ್ಗಿಯ ಜೆಸ್ಕಾಂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳುವುದಾಗಿ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News