ಕಲಬುರಗಿ | ಮಾ. 27ರಂದು ಕಡವು ನಡೆಸುವ ಹಕ್ಕು ಹರಾಜು ಪ್ರಕ್ರಿಯೆ
ಕಲಬುರಗಿ : ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಲಯ ವ್ಯಾಪಿಯಲ್ಲಿ ಬರುವ ಕಡವುಗಳನ್ನು 2025-26ನೇ ಸಾಲಿನ 2025ರ ಏ.1 ರಿಂದ 2026ರ ಮಾ. 31ರವರೆಗಿನ ಅವಧಿಯಲ್ಲಿ ಇಲಾಖೆಯಿಂದ ಒದಗಿಸುವ ಅಥವಾ ಸ್ವಂತ ಮರದ/ ಫೈಬರ್, ಉಕ್ಕಿನ ಯಂತ್ರ ಚಾಲಿತ ನಾವೆ ಅಥವಾ ಮರದ ಮೂಗ ನಾವೆಯನ್ನು ಇಟ್ಟು ಕಡವು ನಡೆಸುವ ಹಕ್ಕಿನ ಬಹಿರಂಗ ಹರಾಜು ಇದೇ ಮಾ.27ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಡವು ನಿರೀಕ್ಷಕರ ಕಚೇರಿಯಲ್ಲಿ ಜರುಗಲಿದೆ ಎಂದು ಕಲಬುರಗಿ ವಲಯದ ಸಹಾಯಕ ಕಡವು ನಿರೀಕ್ಷಕರು ತಿಳಿಸಿದ್ದಾರೆ.
ಆಯಾ ತಾಲೂಕಿನ ಕಡವುಗಳ ವಿವರ :
ಜೇವರ್ಗಿ ತಾಲೂಕು :
ಹೊತ್ತಿನಮಡು-ಕೊಲ್ಲೂರು, ಮಲ್ಲಾ(ಬಿ)-ಕುಲಕುಂದಾ, ಮಲ್ಲಾ(ಕೆ)-ಮಳಗ, ಹೊನ್ನಾಳ-ತುನ್ನೂರು, ರಾಜವಾಳ-ಕಡಬೂರ, ಬಣಮಿ-ಬಸವಪಟ್ಟಣ, ಸಾಗನೂರು-ಯಕಂಚಿ.
ಚಿತ್ತಾಪುರ ತಾಲೂಕು :
ಯನಗುಂಟಾ-ಹೊನಗುಂಟಾ ಹಾಗೂ ಕೊಲ್ಲೂರು-ಹೊತ್ತಿನಮಡು.
ಅಫಜಲಪುರ ತಾಲೂಕು :
ಹವಳಗಾ-ಕುಮಸಿ, ಭಿಮಾ ಅಮರ್ಜಾ ಸಂಗಮ, ಮಣ್ಣೂರು-ಚಿಕ್ಕಮಣ್ಣೂರ-1, ಮಣ್ಣೂರು-ಚಿಕ್ಕಮಣ್ಣೂರ-2, ಮಣ್ಣೂರು-ಚಿಕ್ಕಮಣ್ಣೂರ-3, ಮಣ್ಣೂರು-ಚಿಕ್ಕಮಣ್ಣೂರ-4, ಮಣ್ಣೂರು-ಚಿಕ್ಕಮಣ್ಣೂರ-5 ಹಾಗೂ ಮಣ್ಣೂರು-ಚಿಕ್ಕಮಣ್ಣೂರ-6.
ಈ ಹರಾಜಿಗೆ ಸಂಬಂಧಿಸಿದಂತೆ ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಲಯದ ಕಡವು ನಿರೀಕ್ಷಕರ ಕಾರ್ಯಾಲಯ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೇರ್ ಆಫ್ ಶಾಂತ ಕೆ. ಚಿಲ್ಲರಗಿ, ಮನೆ. ನಂ. 11-1801, ಎರಡು ಮತ್ತು ಮೂರನೇ ಬಸ್ ಡಿಪೋ, ಎಸ್.ಬಿ. ಕಾಲೇಜು ರಸ್ತೆ, ವಿದ್ಯಾನಗರ ಕಲಬುರಗಿ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 9980783800ನ್ನು ಸಂಪರ್ಕಿಸಲು ಕೋರಿದೆ.