ಕಲಬುರಗಿ | ಅಂಬೇಡ್ಕರ್ ಜಯಂತ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ

Update: 2025-03-26 22:24 IST
Photo of Program
  • whatsapp icon

ಕಲಬುರಗಿ : ಶಹಾಬಾದ್‌ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಎ.22 ಸಾಯಂಕಾಲ 5 ಗಂಟೆಗೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಶಂಕರ ಅಳ್ಳೋಳಿ ತಿಳಿಸಿದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕದಲ್ಲಿ ಭೀಮ ಉತ್ಸವ ಹಾಗೂ ಬಿಹಾರದಲ್ಲಿ ಮಹಾಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನದ ಬೋಧ ಗಯಾ ಟೆಂಪಲ್ ಆಕ್ಟ್ 1949 ರದ್ದುಗೊಳಿಸಲು ಒತ್ತಾಯಿಸಿ ಈ ಕಾರ್ಯಕ್ರಮ ನಡೆಸುತ್ತಿದ್ದೆವೆ. ಆದ್ದರಿಂದ ಎಲ್ಲಾ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಜಯಂತ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಸುರೇಶ ಮೆಂಗನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಯಂತ್ಯೋತ್ಸವದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.

ನಾಗರಾಜ ಸಿಂಗೆ, ಭರತ್ ಧನ್ನಾ, ಅಲ್ಲಮಪ್ರಭು ಮಸ್ಕಿ, ಬಸವರಾಜ ಮಯೂರ, ರಾಜು ಜಂಬಗಿ, ಸತೀಶ್ ಕೋಬಾಳಕರ, ಮಲ್ಲಣ್ಣ ಮಸ್ಕಿ, ಪಿಎಸ ಮೇತ್ರಿ, ಪ್ರವೀಣ ರಾಜನ, ಶಿವಕುಮಾರ ಜಮಾದಾರ, ಮಲ್ಲಿಕಾರ್ಜುನ ಕಟ್ಟಿಮನಿ, ಸ್ನೇಹಿತ ಜಾಯಿ, ಶಿವಶಾಲ ಪಟ್ಟಣಕರ್, ಕೃಷ್ಣಪ್ಪ ಕರಣಿಕ, ಶರಣು ಪಗಲಾಪುರ, ರಾಜೇಶ ಯನಗುಂಟಿಕರ, ಮೋಹನ ಹಳ್ಳಿ, ಭರತ್ ಧನ್ನಾ, ಮನೋಹರ ಕೋಳೂರ, ಪುನೀತ ಹಳ್ಳಿ, ರಾಜು ಕಾಳನೂರ, ಮಲ್ಲಣ್ಣ ದೊಡ್ಡಿ, ರಾಜು ಭೋರಿ ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News