ಕಲಬುರಗಿ | ಅಟಲ್ ವಿರಾಸತ ಕಾರ್ಯಕ್ರಮದಡಿ ಸೋಮಯಾಜಿಗೆ ಸನ್ಮಾನ

Update: 2025-03-26 22:38 IST
ಕಲಬುರಗಿ | ಅಟಲ್ ವಿರಾಸತ ಕಾರ್ಯಕ್ರಮದಡಿ ಸೋಮಯಾಜಿಗೆ ಸನ್ಮಾನ
  • whatsapp icon

ಕಲಬುರಗಿ : ಶಹಾಬಾದ್‌ ನಗರದ ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ವತಿಯಿಂದ ಬುಧವಾರ ಮಾಜಿ ಪ್ರಧಾನಿಗಳಾದ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅಟಲ್ ವಿರಾಸತ ಕಾರ್ಯಕ್ರಮದಡಿ ದಿ.ಗಣಪತಭಟ್ಟ ಸೋಮಯಾಜಿ ಅವರ ಪರವಾಗಿ ಅವರ ಸುಪುತ್ರರಾದ ಅಶೋಕ ಗಣಪತಭಟ್ಟ ಸೋಮಯಾಜಿ ಅವರನ್ನು ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಕನಕಪ್ಪ ದಂಡಗುಲಕರ್, ಗಣಪತ್ಭಟ್ಟ ಸೋಮಯಾಜಿ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ಪಕ್ಷಕ್ಕೆ ಮಾಡಿದ ಕಾರ್ಯ ಅವಿಸ್ಮರಣಿಯವಾದುದು. ಅಟಲ್ ಬಿಹಾರಿ ವಾಜಪೇಯಿ ಅವರು ಶಹಾಬಾದ್‌ ನಗರಕ್ಕೆ ಮೂರು ಬಾರಿ ಬಂದಿದ್ದಾರೆ. ಅವರು ಬಂದಾಗ ಮೊದಲು ಗಣಪತಭಟ್ಟ ಸೋಮಯಾಜಿ ಅವರನ್ನು ಬೇಟಿ ಮಾಡುತ್ತಿದ್ದರು.ಆ ಕಾಲದಲ್ಲಿ ಗಣಪತಭಟ್ಟ ಸೋಮಯಾಜಿಯವರು ಪ್ರಭಾವಿ ವ್ಯಕ್ತಿಯಾಗಿದ್ದರು ಎಂದರು.

ಬಿಜೆಪಿ ಉಪಾಧ್ಯಕ್ಷ ಸಿದ್ರಾಮ ಕುಸಾಳೆ, ದಿನೇಶ ಗೌಳಿ, ಕನಕಪ್ಪ ದಂಡಗುಲಕರ, ಭೀಮರಾವ ಸಾಳುಂಕೆ, ಅನೀಲ ಬೊರಗಾಂವಕರ, ನಾಗರಾಜ ಮೆಲಗಿರಿ, ಭಾನುದಾಸ ತುರೆ, ಶೀವಕುಮಾರ ಇಂಗಿನಶೆಟ್ಟಿ, ಬಸವರಾಜ ಬಿರಾದಾರ, ನಾರಾಯಣ ಕಂದಕೂರ, ರೇವಣಸಿದ್ದ ಮತ್ತಿಮಡು, ಜಗದೇವ ಸುಬೆದಾರ, ಅನೀಲದತ್ತ, ಶ್ರೀನಿವಾಸ ದೇವಕರ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News