ಕಲಬುರಗಿ | 12 ಶಾಲಾ ಶಿಕ್ಷಕಿಯರಿಗೆ ಕಿತ್ತೂರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

ಕಲಬುರಗಿ : ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ದಕ್ಷಿಣ ವಲಯದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಿರಿಯ ಸಾಹಿತಿ ಶಾಂತಾ ಪಸ್ತಾಪೂರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ 12 ಶಿಕ್ಷಕಿಯರಿಗೆ ಕಿತ್ತೂರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾಗೃತಿಕ ಲಿಂಗಾಯತ ಘಟಕದ ಮಹಿಳಾ ಅಧ್ಯಕ್ಷೆ ನಳಿನಿ ಮಹಾಗವಕರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೆಗಲತಿಪ್ಪಿ, ಉಪನ್ಯಾಸಕಿ ನೀಲಾಂಬಿಕ ಪೊಲೀಸ್ ಪಾಟೀಲ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ದಕ್ಷಿಣ ವಲಯ ಉಪಾಧ್ಯಕ್ಷೆ ರೇಣುಕಾ ರಮೇಶ ಡಾಂಗೆ ಅವರು ವಹಿಸಿದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ ಹೂಗಾರ, ಕ.ರಾ.ಪೌ.ಸ.ಶಿ ದಕ್ಷಿಣ ವಲಯ ಅಧ್ಯಕ್ಷ ಮುರಳಿಧರ ಟೋಣಪೆ, ಕ.ರಾ.ಪೌ.ಸ.ಶಿ ಜಿಲ್ಲಾ ಕಾರ್ಯದರ್ಶಿ ಜಮೀಲ್ ಇಮ್ರಾನ್, ಕ.ರಾ.ಪೌ.ಸ.ಶಿ ತಾಲೂಕ ಕಾರ್ಯದರ್ಶಿ ವಿಜಯಕುಮಾರ್ ಪಾಟೀಲ್, ಧರ್ಮರಾಜ ಜವಳಿ, ಕ.ರಾ.ಪೌ.ಸ.ಶಿ ದಕ್ಷಿಣ ವಲಯ ನಿದೇರ್ಶಕರಾದ ಭಾಗ್ಯಲಕ್ಷ್ಮಿ ಗಿರೆಗೋಳ, ನಿರ್ಮಲ ಸಂಘದ ಎಲ್ಲಾ ಪದಾಧಿಕಾರಿಗಳು, ಕಲ್ಬುರ್ಗಿ ದಕ್ಷಿಣ ವಲಯದ ಶಿಕ್ಷಕರು, ಶಿಕ್ಷಕಿಯರು, ಮುಖ್ಯ ಗುರುಗಳು, ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.
ಈ ಕಾರ್ಯಕ್ರಮವನ್ನು ಸುಜಾತ ಪಾಟೀಲ್ ನಿರೂಪಿಸಿದರು. ಶಶಿಕಲಾ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ವೀಣಾ ಅವರು ಸ್ವಾಗತಿಸಿದರು. ನಂತರ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಶಿಕ್ಷಕಿಯರಿಗೆ ವಿವಿಧ ರೀತಿಯ ಫನ್ ಗೇಮ್ ಗಳನ್ನು ಆಡಿಸಲಾಯಿತು. ಅದರಲ್ಲಿ ವಿಜೇತರಾದ ಮಹಿಳಾ ಶಿಕ್ಷಕಿಯರಿಗೆ ಬಹುಮಾನಗಳು ವಿತರಿಸಲಾಯಿತು.