ಕಲಬುರಗಿ | ಯುಗಾದಿ ಹಬ್ಬದ ಪ್ರಯುಕ್ತ: ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ

ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2ರ ವತಿಯಿಂದ ಇದೇ ಮಾ.21 ರಿಂದ 31 ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಹಾಗೂ ಮಾ.30 ರಂದು ನಡೆಯುವ ರಥೋತ್ಸವಕ್ಕೆ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಕೆಳಕಂಡ ಬಸ್ ನಿಲ್ದಾಣದಿಂದ /ಘಟಕಗಳಿಂದ ವಿಶೇಷ (ಹೆಚ್ಚಿನ) ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಂಚಾರ ಅಧಿಕಾರಿ-ರವೀಂದ್ರಕುಮಾರ ಡಿಗ್ಗಿ-7760984086, ಕಲಬುರಗಿ ನಿಲ್ದಾಣ ಅಧಿಕಾರಿಗಳು ಕೆ.ಬ.ನಿ.-ಮಲ್ಲಿಕಾರ್ಜುನ ಜೋಗೂರ-9686976451, ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಸ.ಸಂ.ಅ- ಅನಿಲಕುಮಾರ-8618637395, ಆಳಂದ ಬಸ್ ನಿಲ್ದಾಣದ ಘ.ವ್ಯ-ಯೋಗಿನಾಥ ಸರಸಂಬಿ-7760992116, ಜೇವರ್ಗಿ ಬಸ್ ನಿಲ್ದಾಣ ಘ.ವ್ಯ-ಜೆ.ಡಿ. ದೊಡಮನಿ 7760992118 ಹಾಗೂ ಅಫಜಲಪೂರ ಬಸ್ ನಿಲ್ದಾಣ ಘ.ವ್ಯ –ಅಮೀನಪ್ಪ ಬೋವಿ-7760992121.
ಇದಲ್ಲದೇ 40 ರಿಂದ 45 ಪ್ರಯಾಣಿಕರಿದ್ದಲ್ಲಿ ಸದರಿ ಗ್ರಾಮದಿಂದಲೇ ನೇರವಾಗಿ ಸಾರಿಗೆ ಸೌಲಭ್ಯ ಒದಗಿಸಲಾಗುತ್ತಿದ್ದು, ಸಾರ್ವಜನಿಕ/ಪ್ರಯಾಣಿಕರ/ಭಕ್ತಾದಿಗಳು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.