ಮಹಿಳೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿದ್ದು ಡಾ.ಅಂಬೇಡ್ಕರ್ : ಶಾಂತಪ್ಪ ಹೆಬಳಿ

Update: 2024-11-13 13:28 GMT

ಕಲಬುರಗಿ : ಮಹಿಳೆಯರಿಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿರುವುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ ಎಂದು ಉಪನ್ಯಾಸಕ ಶಾಂತಪ್ಪ ಹೆಬಳಿ ಹೇಳಿದ್ದಾರೆ.

ಆಳಂದ ತಾಲ್ಲೂಕಿನ ಕಡಗಂಚಿಯ ಸಾಯಿ ಪ್ರತಾಪ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಜಿಡಗಾ ಗ್ರಾಮದ ಶ್ರೀ ಸಿದ್ದರಾಮೇಶ್ವರ ಮಂದಿರದ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಅಂಗವಾಗಿ ಹಮ್ಮಿಕೊಂಡಿದ್ದ 'ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಿಳೆ ' ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಕಾನೂನನ್ನು ವಿರೋಧಿಸುತ್ತಾರೆ, ಏಕೆಂದರೆ ಅದು ಮಹಿಳೆಯರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸುತ್ತದೆ. ಮಹಿಳೆಯರಿಗೆ ವಿಚ್ಛೇದನದ ಹಕ್ಕನ್ನು ನಿರಾಕರಿಸುತ್ತದೆ ಮತ್ತು ಪುರುಷರಿಗೆ ಹಲವಾರು ವಿವಾಹ ಮಾಡಿಕೊಳ್ಳುವ ಹಕ್ಕನ್ನು ನೀಡುತ್ತದೆ ಮತ್ತು ಇಲ್ಲಿನ ಬಹುಪಾಲು ಕಾನೂನುಗಳು ಪುರುಷ ಪ್ರಧಾನವಾದವುಗಳು ಎಂದು ಖಂಡಿಸಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಯಿ ಪ್ರತಾಪ್ ಕಲಾ ಮಹಾ ವಿದ್ಯಾಲಯದ ಅಧ್ಯಕ್ಷರಾದ ಡಾ.ಸುನಿಲ್ ಕುಮಾರ್ ಕಾಂಬಳೆ, ಉಪನ್ಯಾಸಕ ಅಂದಪ್ಪ ಧೋನಿ, ಉಪನ್ಯಾಸಕಿ ಕು.ಅನಿತಾ ಚಂಗಟಿ, ಕೆ.ಪ್ರಿಯಾ ಮತ್ತಿತರರು ಉಪಸ್ಥಿತರಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News