ಕಲಬುರಗಿ | ಸಿಪಿಐ(ಎಂ) ಪಕ್ಷದ 24ನೇ ಜಿಲ್ಲಾ ಸಮ್ಮೇಳನ

Update: 2024-11-24 12:24 GMT

ಕಲಬುರಗಿ : ಸಿಪಿಐ(ಎಂ) ಪಕ್ಷದ ಕಲಬುರಗಿ 24ನೇ ಜಿಲ್ಲಾ ಸಮ್ಮೇಳನಕ್ಕೆ ನಗರದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.

ಜಗತ್ ವೃತ್ತದಲ್ಲಿ ಜಮಾಗೊಂಡ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ʼಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ದೇಶದ ಚುಕ್ಕಾಣಿಯನ್ನು ದೀರ್ಘಕಾಲದವರೆಗೆ ಹಿಡಿಯಲು ಸಾಧ್ಯವಿಲ್ಲ ಎಂಬುವುದು ಇತ್ತೀಚಿನ ಚುನಾವಣೆಯಲ್ಲಿ ಗೊತ್ತಾಗಿದೆ. ಅಭಿವೃದ್ಧಿ ಎನ್ನುವುದು ಮನುಷ್ಯನ ಪರವಾಗಿ ಇರಬೇಕೆ ವಿನಃ ಬಂಡವಾಳ ಶಾಹಿಗಳ ಪರವಲ್ಲʼ ಎಂದು ಕಿಡಿಕಾರಿದರು.

ʼಕಲಬುರಗಿ ಜಿಲ್ಲೆಯ ಜನರ ತಲಾ ಆದಾಯ ಕಡಿಮೆ ಇರುವುದರಿಂದ ಇಲ್ಲಿನ ಕಾರ್ಮಿಕರು ಬೇರೆಡೆ ಕೆಲಸಕ್ಕೆ ಹೋಗುತ್ತಿದ್ದಾರೆ, ಇದನ್ನು ಸರಕಾರ ತಡೆಯಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ರೈತರ ಭೂಮಿಯನ್ನು ಡಿನೋಟಿಫೈ ಮಾಡಬಾರದುʼ ಎಂದು ಸರಕಾರಕ್ಕೆ ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ಬಡವರ ಸಂಪತ್ತು ಲೂಟಿ ಮಾಡಿ, ಬಂಡವಾಳಶಾಹಿಗಳಿಗೆ ಮಣೆ ಹಾಕುತ್ತಿರುವ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವೇಳೆ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವರಲಕ್ಷ್ಮೀ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಧಾಮ ಧನ್ನಿ, ಶ್ರೀಮಂತ ಬಿರೆದಾರ್, ಶರಣಬಸಪ್ಪ ಮಮಶೆಟ್ಟಿ, ಶಾಂತಾ ಗಂಟೆ, ಎಮ್.ಬಿ ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ, ಗೌರಮ್ಮ ಪಾಟೀಲ, ಮೇಘರಾಜ ಕಟಾರೆ, ಎಸ್ಎಫ್ಐ ಸಂಘಟನೆಯ ಸುಜಾತಾ, ಡಿವೈಎಫ್ಐ ಸಂಘಟನೆಯ ರಾಜ್ಯ ಅಧ್ಯಕ್ಷೆ ಲವಿತ್ರ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ನಡೆದ ಬೃಹತ್ ಮೆರವಣಿಗೆಯು ನಗರದ ಗಂಜ್ ಪ್ರದೇಶದಿಂದ ಸೊಪರ್ ಮಾರ್ಕೆಟ್ ಮೂಲಕ ಜಗತ್ ಸರ್ಕಲ್ ವರೆಗೆ ನಡೆಸಲಾಯಿತು. ಸಾವಿರಾರು ಕಾರ್ಮಿಕರು ಸಮ್ಮೇಳನಕ್ಕೆ ಸಾಕ್ಷಿಯಾದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News