ಕಲಬುರಗಿ: 1.62 ಲಕ್ಷ ಮೌಲ್ಯದ ಗಾಂಜಾ ಜಪ್ತಿ: ಓರ್ವನ ಬಂಧನ

Update: 2024-11-24 04:08 GMT

ಕಲಬುರಗಿ: ಅಕ್ರಮವಾಗಿ ಬೆಳೆದಿದ್ದ 1.62 ಲಕ್ಷ ಮೌಲ್ಯದ 3 ಕೆ.ಜಿ 260 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿ, ಓರ್ವನನ್ನು ಬಂಧಿಸುವಲ್ಲಿ ಮಹಾಗಾಂವ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಯಕ್ಕಂಚಿ ಗ್ರಾಮದ ಮಲ್ಲಣ್ಣ ಕಡಬೂರ ಎಂದು ಗುರುತಿಸಲಾಗಿದೆ.ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಅವರ ನೇತೃತ್ವದಲ್ಲಿ, ಒಂದು ತಂಡ ರಚನೆ ಮಾಡಿ, ಮಹಾಗಾಂವ ಪೊಲೀಸ್ ಠಾಣಾ ವ್ಯಾಪ್ತಿಯ ಯಕ್ಕಂಚಿ ಗ್ರಾಮದಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾದ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮೀಣ ವೃತ್ತದ ಸರ್ಕಲ್ ಶಿವಶಂಕರ ಸಾಹು, ಕಮಲಾಪುರ ಪಿ.ಎಸ್.ಐ ಆಶಾ, ಸಿಬ್ಬಂದಿಯರಾದ ಸಂತೋಷ, ಕಿಶನ ಜಾಧವ, ಬಸವರಾಜ, ಸಿದ್ಧಲಿಂಗ, ಗೌರಮ್ಮ, ಕುಪೇಂದ್ರ ಮತ್ತು ಸೈಯದ ಶಕೀಲ್ ಅಲಿ ಅವರನ್ನು ಒಳಗೊಂಡ ತಂಡದಿಂದ ಈ ಪ್ರಕರಣ ಬೇಧಿಸಲಾಗಿದೆ.

ಆರೋಪಿಯ ವಿರುದ್ಧ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 ಮಹಾಗಾಂವ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯಾರ ಕಾರ್ಯಾಚರಣೆಗೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News