ಉಪಚುನಾವಣೆ | ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು : ಚಿಂಚೋಳಿಯಲ್ಲಿ ವಿಜಯೋತ್ಸವ

Update: 2024-11-23 17:51 IST
Photo of Celebration
  • whatsapp icon

ಕಲಬುರಗಿ : ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಾದ ಯಾಸಿರ್ ಅಹ್ಮದ ಪಠಾಣ್, ಅನ್ನಪೂರ್ಣ ತುಕಾರಾಂ, ಸಿ.ಪಿ ಯೋಗೇಶ್ವರ್ ಅವರು ಗೆಲುವು ಸಾದಿಸಿದ ಹಿನ್ನಲೆಯಲ್ಲಿ ಚಿಂಚೋಳಿಯಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಸವರಾಜ ಆರ್.ಮಾಲಿ ಅವರ ನೇತೃತ್ವದಲ್ಲಿ ಚಿಂಚೋಳಿ ಪಟ್ಟಣದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅಬ್ದುಲ್ ಬಾಸಿದ್ ಸಾಬ್, ಆನಂದ ಟೈಗರ, ಜಗನಾಥ ಗುತ್ತೇದಾರ, ರಾಮಶೆಟ್ಟಿ ಪವಾರ, ನಾಗೇಶ್ ಗುಣಾಜಿ, ಸೈಯದ್ ಶಬ್ಬೀರ್, ಖಲಿಲ್ ಪಟೇಲ್, ಅನ್ವರ್ ಖತೀಬ್ ಸಾಬ್, ವಿಶ್ವ ಹೊಡೆಬೀರನಳ್ಳಿ, ಆರ್.ಗಣಪತಿರಾವ್, ಸುಭಾಷ್ಚಂದ್ರ ಪಾಟೀಲ್, ಶಿವರಾಜ ಪಾಟೀಲ್, ರಾಜು ನವಲೆ, ಗಂಗಾಧರ ಗಡ್ಡಿಮನಿ, ಯಲ್ಲಾಲಿಂಗ ಕಮಲಕಾರ, ಶೇಕ್ ಫರೀದ, ಗೋವಿಂದ ರಾಠೋಡ, ಸುಂದರ ಮೂರ್ತಿ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News