ಕಲಬುರಗಿ | ಇಪಿಎಫ್ ಕಚೇರಿಯಲ್ಲಿ ಕ್ಯಾನ್ಸರ್‌ ಬಗ್ಗೆ ಜಾಗೃತಿ ಕಾರ್ಯಕ್ರಮ

Update: 2024-12-12 14:03 GMT

ಕಲಬುರಗಿ : ನಗರದ ಆಳಂದ ರಸ್ತೆಯಲ್ಲಿರುವ ಇಪಿಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಗುರುವಾರ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ನಗರದ ಎಚ್.ಸಿ.ಜಿ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಶಾಂತಲಿಂಗ ನಿಗ್ಗುಡಗಿ ಮಾತನಾಡಿ, 'ಕ್ಯಾನ್ಸರ್‌ ಬಗ್ಗೆ ಭಯ ಬೇಡ, ಇಂದಿನ ದಿನಗಳಲ್ಲಿ ಅದರ ಕುರಿತು ಅರಿವು ಅಗತ್ಯವಾಗಿದೆ ಎಂದು ಹೇಳಿದರು.

ಕ್ಯಾನ್ಸರ್‌ ಎಂದರೆ ದೇಹದಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್‌ ಗುರುತಿಸುವಿಕೆ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿದಲ್ಲಿ ಗುಣವಾಗುವ ಪ್ರಮಾಣ ಅಧಿಕ. ಹೀಗಾಗಿ ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಅಗತ್ಯವಾಗಿದೆ ಎಂದರು.

ಕ್ಯಾನ್ಸರ್‌ ಕುರಿತು ಭಯವೇ ಹೆಚ್ಚಾಗಿದೆ, ಅರಿವು ಕಡಿಮೆಯಾಗಿದೆ. ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್‌ ಸೇವನೆಯಿಂದ ದೂರವಿರಬೇಕು. ಕ್ಯಾನ್ಸರ್ ಮುಂಜಾಗ್ರತಾ ಕ್ರಮವಾಗಿ ದಿನನಿತ್ಯ ಕನಿಷ್ಠ ಅರ್ಧ ಗಂಟೆಗಳ ಕಾಲ ನಿಯಮಿತ ವ್ಯಾಯಾಮ, ಯೋಗ ಹಾಗೂ ವಾಕಿಂಗ್ ಮಾಡುವುದು ಅಗತ್ಯವಿದೆ. ಅದೇ ರೀತಿಯಾಗಿ ದಿನನಿತ್ಯ ಹಸಿರು ತರಕಾರಿ‌ ಹಾಗೂ ಕಾಲೋಚಿತ ಹಣ್ಣುಗಳನ್ನು ಉಪಯೋಗಿಸುವ ಉತ್ತಮ ಎಂದರು.

ಕಾರ್ಯಕ್ರಮದಲ್ಲಿ ಇ.ಪಿ.ಎಫ್ ಮನೋರಂಜನಾ ಸಂಘದ ಪರವಾಗಿ ವೈದ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರವಿ ಯಾದವ, ವಿಠ್ಠಲ್, ಅರ್ಸ್ಲಾನ್ ಕಿತ್ತೂರ, ಬಸವರಾಜ ಹೆಳವರ, ಮದನ ಕುಲಕರ್ಣಿ, ಜಗನ್ನಾಥ, ಕಲ್ಪನಾ ಮಧಬಾವಿ, ಕೇಶವರಾವ ಕುಲಕರ್ಣಿ, ಮೊಹ್ಮದ್ ಯೂಸುಫ್, ಪ್ರತಿಭಾ, ಶಿವಶರಣಪ್ಪ ಶಿವಕೇರಿ,ವಿರೇಶ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News