ಕಲಬುರಗಿ | ಕಾರ್ಖಾನೆಯಲ್ಲಿ ಕಬ್ಬು ಅರಿಯುವ ಮುನ್ನ ಬೆಲೆ ನಿಗದಿಪಡಿಸುವಂತೆ ರೈತರ ಆಗ್ರಹ

Update: 2024-11-08 14:06 GMT

ಕಲಬುರಗಿ : ಆಳಂದ ತಾಲೂಕಿನ ಭೂಸನೂರ ಗ್ರಾಮದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಮುನ್ನ ಪ್ರತಿ ಟನ್ಗೆ ಬೆಲೆ ನಿಗದಿ ಮಾಡಬೇಕು ಎಂದು ಕಬ್ಬು ಬೆಳೆಗಾರ ರೈತರು ಹಾಗೂ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿಯೋಗ ಗುತ್ತಿಗೆ ಪಡೆದ ಕಾರ್ಖಾನೆ ಉಪಾಧ್ಯಕ್ಷ ಭಾಸ್ಕರ್ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗಜoಗಮ ಎಸ್.ಪಾಟೀಲ್ ಧಂಗಾಪೂರ, ಕಲಬುರಗಿ-ಬೀದರ್-ಯಾದಗಿರ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್ ಇವರ ನೇತ್ರತ್ವದಲ್ಲಿ ರೈತ ಮುಖಂಡರ ನಿಯೋಗ ಕಾರ್ಖಾನೆಗೆ ತೆರಳಿ ರೈತರ ಸಮಸ್ಯೆ ಮತ್ತು ಬೇಡಿಕೆಗಳು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆ ವ್ಯಾಪ್ತಿಯ ಆಳಂದ, ಅಫಝಲ್ಪುರ, ಕಲಬುರಗಿ, ಕಮಲಾಪೂರ ತಾಲೂಕುಗಳ ರೈತರ ಕಬ್ಬನ್ನು ಮೊದಲು ಅರಿಯಬೇಕು, ಲಾರಿ ಹಾಗೂ ಲೇಬರ್ ಮತ್ತು ಹಾರ್ವೇಸ್ಟಿಂಗ್ ಮಸೀನ್ದವರು ರೈತರ ಬಳಿ ಹಣ ಕೇಳುವರ ವಿರುದ್ದ ಎನ್ಎಸ್ಎಲ್ ಕಾರ್ಖಾನೆಯವರು ಕ್ರಮ ತೆಗೆದುಕೊಳ್ಳಬೇಕು, ರೈತರ ಕಬ್ಬು ಆದ್ಯತೆಯ ಮೇರೆಗೆ ನುರಿಸಬೇಕು, ವಿಳಂಬ ಮಾಡದೆ ರೈತರ ಖಾತೆಗೆ ಹಣ ಜಮಾ ಮಾಡಬೇಕು, ಹಂಗಾಮಿನಲ್ಲಿ ಯಾವುದೇ ರೈತರಿಗೆ ತೊಂದರೆಯಾಗದoತೆ ಕಬ್ಬು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಧರ್ಮರಾಜ ಸಾಹು ಭೂಸನೂರ, ಶಿವರಾಜ ಪಾಟೀಲ್ ಕೋರಳ್ಳಿ, ಚನ್ನಬಸಪ್ಪ ಪಾಟೀಲ್ ದಣ್ಣೂರ, ಶಾಂತೇಶ್ವರ ಪಾಟೀಲ್ ಹೊದಲೂರ, ಪ್ರಶಾಂತ ಪಾಟೀಲ್ ಭೂಸನೂರ, ಕೆಎಂಎಫ್ ನಿರ್ದೇಶಕ ಈರಣ್ಣಾ ಝಳಕಿ, ರೈತ ಮುಖಂಡ ರಾಜಶೇಖರ ಯಂಕoಚಿ, ಸಂಜಯ ಪಾಟೀಲ್, ಮಹಾಂತಪ್ಪ ಯಲಶಟ್ಟಿ, ಚಂದ್ರಶೇಖರ ಪಾಟೀಲ್ ಕೋರಳ್ಳಿ, ರಮೇಶ ಉಡಗಿ ಸೇರಿದಂತೆ ಭೂಸನೂರ, ಕೋರಳ್ಳಿ, ಧಂಗಾಪೂರ, ಜವಳಿ, ದೇವಂತಗಿ ಗ್ರಾಮಗಳ ಕಬ್ಬು ಬೆಳೆಗಾರ ರೈತರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News