ಕಲಬುರಗಿ | ಡಿ.23 ರಂದು ರೈತ ಉತ್ಸವ ಸುಗ್ಗಿ ಹಬ್ಬ : ರೈತ ಮುಖಂಡ ಮಲ್ಲಿಕಾರ್ಜುನ್

Update: 2024-12-19 10:29 GMT

ಕಲಬುರಗಿ : ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಲಬುರಗಿ ವತಿಯಿಂದ ಡಿ.23ರಂದು ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ಶರಣಬಸವೇಶ್ವರ ಅನುಭವ ಮಂಟಪದಲ್ಲಿ ರೈತ ಉತ್ಸವ ಸುಗ್ಗಿ ಹಬ್ಬ ಹಾಗೂ ಜಿಲ್ಲಾ ಮಟ್ಟದ ರೈತರ ಸಮಾವೇಶ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮುಖಂಡ ಮಲ್ಲಿಕಾರ್ಜುನ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಕೆಆರ್ಡಿಬಿ ಅಧ್ಯಕ್ಷರೂ ಆಗಿರುವ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ರಾಧಾಕೃಷ್ಣ ದೊಡ್ಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ್ ಮತ್ತಿಮಡು, ತಿಪ್ಪಣ್ಣಪ್ಪ ಕಮಕನೂರು, ಶಶೀಲ್ ನಮೋಶಿ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಡಾ.ಶರಣಬಸವಪ್ಪ ಅಪ್ಪಾ, ಸೋಮನಾಥ ಸ್ವಾಮೀಜಿ, ತೋಘೇಂದ್ರ ಮಹಾಸ್ವಾಮೀಜಿ, ಬಾಲ ತಪಸ್ವಿ ಹವಾ ಮಲ್ಲಿನಾಥ ಸ್ವಾಮೀಜಿ, ಸಂಗನಬಸವ ಶಿವಾಚಾರ್ಯರು, ಸಿದ್ದಲಿಂಗ ಮಹಾಸ್ವಾಮಿಗಳು, ಮಲಕಣ್ಣಪ್ಪ ಮಹಾರಾಜರು, ಸತ್ಯನಂದ ಮುತ್ಯಾ, ಮಲ್ಲಿಕಾರ್ಜುನ್ ಮುತ್ಯಾ, ಶಿವಲಿಂಗ ಶರಣರು ಹಿರೇಮಠ, ಮರೆಪ್ಪ ಮುತ್ಯಾ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಸಮಾಜ ಸೇವ ರತ್ನ, ಮಾಧ್ಯಮ ರತ್ನ ಪ್ರಶಸ್ತಿ, ರೈತ ರತ್ನ ಪ್ರಶಸ್ತಿ, ಹೋರಾಟ ರತ್ನ ಪ್ರಶಸ್ತಿ, ಕಾನೂನು ರತ್ನ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಮೃತ್ ಪಾಟೀಲ್, ಸಾಯಿಬಣ್ಣ ಪೂಜಾರಿ, ಅನಿತಾ ಪಾಟೀಲ್, ಪರಮೇಶ್ವರ್ ಸೇರಿದಂತರ ಇತರ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News