ಕಲಬುರಗಿ : 9ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Update: 2024-12-19 11:04 GMT

ಕಲಬುರಗಿ : ಆಳಂದ ಪಟ್ಟಣದ ಪ್ರವಾಸಿ ಮಂದಿರ ಮುಂದೆ ಆಲ್ ಇಂಡಿಯಾ ಕಿಸಾನ್ ಸಭಾ ಹಾಗೂ ಆಲ್ ಇಂಡಿಯಾ ತಂಜೀಮ್-ಇ-ಇನ್ಸಾಫ್ ಸಂಘಟನೆಗಳ ಮುಖಂಡ ಮೌಲಾ ಮುಲ್ಲಾ ನೇತೃತ್ವದಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ 9ನೇ ದಿನಕ್ಕೆ ಕಾಲಿರಿಸಿದೆ. ಸ್ಥಳಕ್ಕೆ ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ಅವರು ಭೇಟಿ ನೀಡಿ ಬೇಡಿಕೆಯನ್ನು ಆಲಿಸಿದ್ದರೂ ಧರಣಿ ಮುಂದುವರೆದಿದೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಣಕಾಸು ವಹಿವಾಟಿನ ಸಂಪೂರ್ಣ ಪರಿಶೀಲನೆ ಮಾಡಬೇಕು. ಮೀಟರ್ ಬಡ್ಡಿಯ ಅಸಹ್ಯ ಶೋಷಣೆಯನ್ನು ತಕ್ಷಣವೇ ನಿಲ್ಲಿಸಬೇಕು. ಬಡ ಕೂಲಿ ಕಾರ್ಮಿಕರಿಗೆ ಸಮರ್ಥ ಉಳಿತಾಯ ಸಾಧನೆಗಾಗಿ ನೇರ ಹಣಕಾಸು ನೆರವು ನೀಡಬೇಕು. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂಬ ಪ್ರಮುಖ ಬೇಡಿಕೆಗೆ ಮನವಿಯನ್ನು ಮುಖ್ಯಂತ್ರಿಗಳಿಗೆ ನೀಡುವುದಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆದಿದೆ.

ಅಖಿಲಭಾರತ ಕಿಸಾನಸಭಾ ರಾಜ್ಯ ಮುಖಂಡ ಮೌಲಾ ಮುಲ್ಲಾ, ತಾಲೂಕು ಅಧ್ಯಕ್ಷ ಚಂದ್ರಕಾoತ ಖೋಬ್ರೆ, ನಗರ ಅಧ್ಯಕ್ಷ ಬಾಕರ್ ಅಲಿ ಜಮಾದಾರ, ಆರೀಫ್ ಅಲಿ ಲಂಗಡೆ, ಸೈನಾ ಅಜೀಂ ನಾವದಗಿ, ಆರೀಫಾ ಬೇಗಂ, ಕಬೀರಾ ಆಫಾ, ಅಣ್ಣಪ್ಪಾ ಜಮಾದಾರ, ಫಕ್ರೋದ್ದೀನ್ ಗೋಳಾ, ಹೀನಾಬಾನು ನೌಕಾಡಗಲ್ಲಿ, ಹಸೀನಾ ಬಾನು, ಮಮತಾಜ್ ಬೇಗಂ, ಫರಜಾನಾ, ರಾಜೇಶ್ವರಿ, ಬಿಸ್ಮೀಲ್ಲಾ ಮತ್ತಿತರರು ಪಾಲ್ಗೊಂಡಿದ್ದರು.

ಧರಣಿ ಸತ್ಯಾಗ್ರಹಕ್ಕೆ ನಟ ಚೇತನ್ ಸೇರಿ ಮುಖಂಡರ ಬೆಂಬಲ :

ಆಳoದ ಪಟ್ಟಣದಲ್ಲಿ ಜನಪರ ಬೇಡಿಕೆಗೆ ಒತ್ತಾಯಿಸಿ ಕೈಗೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬುಧವಾರ ಚಲನ ಚಿತ್ರನಟ ಆಗಿರುವ ಸಾಮಾಜಿಕ ಹೋರಾಟಗಾರ ಚೇತನ್ ಸೇರಿದಂತೆ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ನಟ ಚೇತನ್ ಅವರು ಬೇಡಿಕೆಯ ಮನವಿ ಆಲಿಸಿದರು, ಸಮಸಮಾಜಕ್ಕಾಗಿ ನ್ಯಾಯಯುತ ಬೇಡಿಕೆಗಳಿದ್ದು ಇದಕ್ಕೆ ಸಮರ್ಥಿಸಿ ಬೆಂಬಲಿಸಲಾಗುವುದು ಹಾಗೂ ಸರ್ಕಾರ ಇಂಥ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯ ಮುಖಂಡ ಮಹಾದೇವ ಧನ್ನಿ, ಪ್ರಕಾಶ ಮೂಲಭಾರತಿ, ಮಹಾದೇವ ಕಾಂಬಳೆ ಬಬಲೇಶ್ವರ ಧರಣಿಗೆ ಬೆಂಬಲ ಸೂಚಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News