ಕಲಬುರಗಿ | ವಿವಿಧ ಇಲಾಖೆಗಳ ಭ್ರಷ್ಟಾಚಾರ ಖಂಡಿಸಿ, ಅನಿರ್ದಿಷ್ಟಾವಧಿ ಧರಣಿ
ಕಲಬುರಗಿ : ಇಲಾಖೆಯಲ್ಲಿನ ಭ್ರಷ್ಟಾಚಾರ ಅವ್ಯವಹಾರ ಖಂಡಿಸಿ ಹಾಗೂ ಜನಪರ ಬೇಡಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಮುಂದುವರೆದಿದೆ.
ಆಳಂದ ತಾಲೂಕು ಆಡಳಿತಸೌಧ ಮುಂದೆ ಸೋಮವಾರದಿಂದ ಕಲ್ಯಾಣ ಕರ್ನಾಟಕ ಜನಪರ ಕಲ್ಯಾಣ ವೇದಿಕೆಯ ರಾಜ್ಯಾಧ್ಯಕ್ಷ ಶರಣು ಕುಲಕರ್ಣಿ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಠೋಡ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಕ್ಷರ ದಾಸೋಹ ಯೋಜನಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಆರಂಭಿಸಿದ ಧರಣಿ ಸತ್ಯಾಗ್ರಹ ಬುಧವಾರ 3ನೇ ದಿನಕ್ಕೆ ಕಾಲಿರಿಸಿದೆ.
ಮಂಗಳವಾರ ಈ ಧರಣಿ ಸ್ಥಳಕ್ಕೆ ಆಗಮಿಸಿದ್ದ ಸಿಡಿಪಿ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳು ಬೇಡಿಕೆಯ ಕುರಿತು ಕ್ರಮಕೈಗೊಳ್ಳಲಾಗುವುದು ಧರಣಿ ವಾಪಸ್ಸು ಪಡೆಯಬೇಕು ಎಂದು ಮಾಡಿದ ಮನವಿ ವಿಫಲವಾಗಿದ್ದು, ಸ್ಥಳಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಲಿಖಿತ ಭರವಸೆ ನೀಡಿದ ಮೇಲೆ ಧರಣಿ ಹಿಂದಕ್ಕೆ ಪಡೆಯುವ ಕುರಿತು ನಿರ್ಧರಿಸಲಾಗುವುದು ಎಂದು ಧರಣಿ ನಿರತರು ಹೇಳಿದ್ದರಿಂದ ಅಧಿಕಾರಿಗಳು ಹಿಂದಿರುಗಿದ್ದಾರೆ.
ಅಂಗನವಾಡಿಗಳಿಗೆ ಸಂಜೀವಿನಿ ಮಹಿಳಾ ವಿಕಾಸ ಸೇವಾ ಸಂಘ ಹಾಗೂ ತಾಲೂಕು ಸಂಪ್ಲಿಮೆoಟರಿ ನ್ಯುಟ್ರಿಶನ ಪ್ರೊಡಕ್ಸನ್ ಸೆಂಟರ್ನಿoದ ಕಳಪೆ ಮಟ್ಟದ ಆಹಾರಧಾನ್ಯ ಮತ್ತು ನಿಗದಿತ ಸಮಯಕ್ಕೆ ಸರಬರಾಜು ಮಾಡದೆ ಸರ್ಕಾರದ ನಿಯಮ ಉಲ್ಲಘನೆ ಮಾಡಿ ಬೇರೊಬ್ಬರಿಗೆ ಸಾಗಾಣಿಕೆ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಅಲ್ಲದೆ, ಅಂಗನವಾಡಿಗಳಿಗೆ ಕಳಪೆ ಮತ್ತು ಅಸಮರ್ಪಕ ಆಹಾರ ವಿತರಿಸುವ ಮೂಲಕ 38,000 ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ಜೊತೆ ಆಟವಾಡುತ್ತಿರುವ ಎಂಎಸ್ಪಿಎಸ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಕ್ರಮ ಜರುಗಿಸುವತನಕ್ಕೆ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಧರಣಿ ನಿರತರು ಪಟ್ಟುಹಿಡಿದ್ದಾರೆ.
ಶರಣು ಕುಲ್ಕರ್ಣಿ, ವೆಂಕಟೇಶ್ ರಾಥೋಡ್, ಜೈರಾಮ್ ರಾಥೋಡ್, ಶಾಂತಕುಮಾರ್ ಮಡಿವಾಳ, ಶರಣು ಉಜಾಲಂಬೆ, ಭೀಮ ಆರ್ಮಿ ಅಧ್ಯಕ್ಷ ಪಿಂಟೂ ಸಾಲೆಗಾಂವ, ಶರಣಬಸಪ್ಪ ಸಾಹುಕಾರ್, ಶಿವಾನಂದ ರೆಡ್ಡಿ, ತೇಜು ಚೌವಾಣ್, ಸಾವನ ಪವಾರ್, ಸಚಿನ್ ರಾಥೋಡ್, ರಾಜು ಘಡಕೆ, ಮಂಜು ಯಲ್ಲೂರ್ ಮತ್ತಿತರು ಧರಣಿಗೆ ಬೆಂಬಲಿಸಿದ್ದಾರೆ.