ಕಲಬುರಗಿ | ಅಮಿತ್ ಶಾ ಹೇಳಿಕೆ ಖಂಡಿಸಿ ನಾಳೆ ಜೇವರ್ಗಿ ಬಂದ್ ಕರೆ

Update: 2024-12-19 14:56 GMT

ಕಲಬುರಗಿ : ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಹೇಳಿಕೆ ಖಂಡಿಸಿ ನಾಳೆ ಶುಕ್ರವಾರ ದಲಿತ ಸಮನ್ವಯ ಸಮಿತಿ ವತಿಯಿಂದ ಹಾಗೂ ವಿವಿಧ ಸಂಘಟನೆ, ಪ್ರಗತಿಪರರ ವತಿಯಿಂದ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ ಶಾಂತಿಯುತವಾಗಿ ಬಂದ್ ಮಾಡಲಾಗುತ್ತದೆ ಎಂದು ದಲಿತ ಮುಖಂಡರು ತಿಳಿಸಿದ್ದಾರೆ.

ಈ ಬಂದ್ ಗೆ ಜೇವರ್ಗಿ ಪಟ್ಟಣದ ಸಾರ್ವಜನಿಕರು ಹಾಗೂ ಎಲ್ಲಾ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವುದರ ಮೂಲಕ ನಮ್ಮ ಪ್ರತಿಭಟನೆಗೆ ಬೆಂಬಲಿಸಬೇಕೆಂದು ದಲಿತ ಮುಖಂಡರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಪುಂಡಲಿಕ ಗಾಯಕವಾಡ, ಭೀಮರಾಯ ನಗನೂರ, ಸುಭಾಷ ಚನ್ನೂರ, ಮಲ್ಲಣ್ಣ ಕೊಡಚಿ, ಸಿದ್ರಾಮಕಟ್ಟಿ,ಮದಬ ಗುಡುರ, ನಿಜಲಿಂಗ ದೊಡಮನಿ, ರವಿಚಂದ್ರ ಗುತ್ತೇದಾರ, ಗಿರೀಶ ತುಂಬಗಿ, ರಾಜಶೇಖರ ಶಿಲ್ಪಿ, ಶ್ರೀಮಂತ ಧನ್ನಕರ್, ರವಿ ಕುಳಗೇರಿ, ನಿಂಗಪ್ಪ ಪೂಜಾರಿ, ಸುನೀಲ ಚನ್ನೂರ ಸೇರಿದಂತೆ ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News