ಕಲಬುರಗಿ | ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಡಿಯಲ್ಲಿ ಬೃಹತ್ ಪ್ರತಿಭಟನೆ
ಕಲಬುರಗಿ : ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಶಾ ಅವರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ಹಿಂದೆ ಮನು ಸಂತಾನದ ವಿಕೃತಿಯನ್ನು ತೋರುತ್ತದೆ ಎಂದು ಬೌದ್ಧ ಸಮಾಜ ಅಧ್ಯಕ್ಷ ಟೋಪಣ್ಣ ಕೋಮಟೆ ಹೇಳಿದರು.
ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್ ಶಾ ಅವರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದನ್ನು ಖಂಡಿಸಿ, ವಾಡಿ ಪಟ್ಟಣದ ಬೌದ್ಧ ಸಮಾಜದ ವತಿಯಿಂದ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಡಿ.18 ರಂದು ಅಮಿತ್ ಶಾ ಪ್ರಜಾಪ್ರಭುತ್ವದ ಪವಿತ್ರ ದೇಗುಲದಲ್ಲಿ ಮಾತನಾಡುವಾಗ ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿದೆ ಅದರ ಬದಲು ದೇವರ ಹೆಸರು ಹೇಳಿದರೆ ಏಳೇಳು ಜನ್ಮ ಸ್ವರ್ಗ ಸಿಗುತ್ತಿತ್ತು ಎಂಬ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಢ ಅಮಿತ್ ಶಾ ತನ್ನ ಆರ್ಎಸ್ಎಸ್ ಬುದ್ದಿಯನ್ನು ಪ್ರದರ್ಶಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ್ ಮಾತನಾಡಿ, ಅಮಿತ್ ಶಾ ಅವರು, ತಮ್ಮ ಇಷ್ಟು ವರ್ಷಗಳ ಸಾಮಾಜಿಕ ಜೀವನದಲ್ಲಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವ್ಯಕ್ಯಿತ್ವ ಅರಿಯದಿರುವುದು ಬಹುದೊಡ್ಡ ದುರಂತ. ದೇಶದ ಭದ್ರ ಬುನಾದಿಗೆ ಕಾರಣರಾದ ಸಂವಿಧಾನ ಶಿಲ್ಪಿಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು ಖಂಡನಾರ್ಹ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಕೂಡಲೆ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಬಂದ್‌ಗೆ ಸ್ಥಳೀಯ ವ್ಯಾಪಾರಿಗಳ ಬೆಂಬಲ :
ವಾಡಿ ಪಟ್ಟಣ ಬಂದ ಸಹಕರಿಸಿದ ಸ್ಥಳೀಯ ವ್ಯಾಪಾರಿಗಳು ಬೆಳಿಗ್ಗೆಯಿಂದಲೇ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಒಂದು ಜಾತಿ ಅಥವಾ ಧರ್ಮಕ್ಕೆ ನೀಮಿತವಲ್ಲ, ದೇಶದ ಪ್ರತಿಯೊಬ್ಬರು ಅಂಬೇಡ್ಕರ್ ಅವರ ಋಣದಲ್ಲಿದ್ದಾರೆ ಎನ್ನುವ ಸಂದೇಶ ನೀಡಿದ್ದಾರೆ. ಪಟ್ಟಣದ ಹಲವು ಸಮುದಾಯಯಗಳು, ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಿಸಿದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಅಣಕು ಶವಯಾತ್ರೆಯನ್ನು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಮಾಡಲಾಯಿತು. ಕೊನೆಗೆ ಅಂಬೇಡ್ಕರ್ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿ ದಹನ ಮಾಡಲಾಯಿತು. ನಂತರ ತಹಶೀಲ್ದಾರ ಚಿತ್ತಾಪುರ ಇವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಬಸವರಾಜ ಕಾಟಮಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ದೇವಿಂದ್ರ ಕರದಳ್ಳಿ ಮಾತನಾಡಿದರು. ಬೌದ್ಧ ಸಮಾಜದ ಪ್ರಧಾನ ಕಾರ್ಯದರ್ಶಿ ದೇವಿಂದ್ರ ನಿಂಬರ್ಗಾ, ಪದಾಧಿಕಾರಿಗಳಾದ ಮಲ್ಲೇಶ ಚುಕ್ಕೇರ, ಸೂರ್ಯಕಾಂತ ರದ್ದೇವಾಡಿ, ಶರಣಬಸ್ಸು ಸಿರೂರಕರ್, ಮಲ್ಲೇಶ ನಾಟೇಕರ್, ಸತೀಶ ಬಟ್ಟರ್ಕಿ, ಮಲ್ಲಿಕಾರ್ಜುನ್ ತುನ್ನೂರ, ಮಲ್ಲಿಕಾರ್ಜುನ ಕಟ್ಟಿ, ಗೊಲ್ಲಾಳಪ್ಪ ಬಡಿಗೇರ, ಬ¯ರಮ ಮಟ್ಟ, ಸುರೇಶ ಮೆಂಗನ್, ಮಲ್ಲಪ್ಪ ಹೊಸಮನಿ, ಅಬ್ರಾಹಿಂ ರಾಜಣ್ಣ, ಅಬ್ದುಲ್ ಖದೀರ್, ಭೀಮರಾವ್ ಕಾಂಬಳೆ, ಬಸವರಾಜ್ ಕೇಶ್ವರ್, ಚಂದಪ್ಪ ಕಟ್ಟಿಮನಿ, ನಾಸಿರ್ ಹುಸೇನ್, ರಮೇಶ ಬಡಿಗೇರ್, ಉದಯ ಯಾದಗಿರಿ, ಸಂಜಯ್ ಗೋಪಾಳೆ, ಹಾಜಪ್ಪ ಲಾಡ್ಲಾಪುರ, ಸಾಯಬಣ್ಣ ದೊಡ್ಡಮನಿ, ಭಗವಾನ ಚಾಮನೂರ, ಬಸವರಾಜ ಜೋಗೂರ, ತಹಸೀಲ್ದಾರ್ ನಾಗಯ್ಯ ಸ್ವಾಮಿ ಮಠಪತಿ,, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ ಲಾಡೆ, ಜಗದೇವಪ್ಪ ಪಾಳಾ, ಪಿಎಸ್ಐ ತಿರಿಮಲೇಶ ಕುಂಬಾರ, ಇದ್ದರು.