ಕಲಬುರಗಿ | 1.73ಲಕ್ಷ ರೂ. ಗೆ ಕಾಳಗಿ ತೈ ಬಜಾರು ಹರಾಜು

Update: 2024-12-21 10:53 GMT

ಕಲಬುರಗಿ : ಕಾಳಗಿ ಪಟ್ಟಣದ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಶನಿವಾರ ತಹಶೀಲ್ದಾರ್ ಘಮಾವತಿ ರಾಠೋಡ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಂಕಜಾ ಎ ನೇತೃತ್ವದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದಿನದ ಹಾಗೂ ವಾರದ ಸಂತೆಯ ತೈ ಬಜಾರ್ ಹರಾಜು ಪ್ರಕ್ರಿಯೆ ಜರುಗಿತು.

2025ರ ಜ.1 ರಿಂದ ಡಿ.31ರ ವರೆಗಿನ ಅವಧಿಯ ತೈ ಬಜಾರ್ ಹರಾಜು ಪ್ರಕ್ರಿಯೆಯಲ್ಲಿ ಮಾಜಿ ಪಪಂ ಸದಸ್ಯ ಜಗನ್ನಾಥ ಚಂದನಕೇರಿ 1.73ಲಕ್ಷ ರೂ. ಬಿಡ್ ಮಾಡುವ ಮೂಲಕ ಒಂದು ವರ್ಷದ ತೈ ಬಜಾರ್ ಹರಾಜನ್ನು ಪಡೆದುಕೊಂಡರು.

ತಹಶೀಲ್ದಾರ್ ಘಮಾವತಿ ರಾಠೋಡ, ಪಪಂ ಮುಖ್ಯಾಧಿಕಾರಿ ಪಂಕಜಾ ಎ., ಪಪಂ ಸಂಘಟನಾ ಅಧಿಕಾರಿ ರೇಣುಕಾ ಕಾಬಾ, ಮಾಜಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಮಾಜಿ ಪಪಂ ಸದಸ್ಯ ಪ್ರಶಾಂತ ಕದಮ, ಜಗನ್ನಾಥ ಚಂದನಕೇರಿ, ಮುಖಂಡರಾದ ಪರಮೇಶ್ವರ ಮಡಿವಾಳ, ಶ್ರೀನಿವಾಸ್ ಗುರಮಿಠಕಲ್, ಗೌಡಪ್ಪಗೌಡ ಕಲ್ಲಹಿಪ್ಪರಗಿ, ಶಿವಕುಮಾರ್ ಕಮಲಾಪೂರ, ನೀಲಕಂಠ ಮಡಿವಾಳ, ಸಂತೋಷ ಪತಂಗೆ, ಅವಿನಾಶ್ ಗುತ್ತೇದಾರ, ಫರಾನ್ ಪಟೇಲ್, ರವಿ ಚಿನ್ನಾ, ಭೀಮರಾಯ ಮಲಘಾಣ, ಶಿವಕುಮಾರ್ ಚಿಂತಕೊಟಿ, ತಿಮ್ಮಯ್ಯ ಒಡೆಯರಾಜ್, ಅಭಿಷೇಕ ಮೊಟಗಿ, ಪಪಂ ಸಿಬ್ಬಂಧಿಗಳು ಸಾರ್ವಜನಿಕರು ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News