ಕಲಬುರಗಿ | ಸಂಗೀತವು ನಮ್ಮ ಮನಸ್ಸಿಗೆ ಮುದ ನೀಡುತ್ತದೆ : ಗೌರಿಶಂಕರ ಎಸ್.ಸಾಲಕ್ಕಿ

Update: 2024-12-21 14:43 GMT

ಕಲಬುರಗಿ : ಜಿಲ್ಲೆಯ ತಾವರಗೇರಾ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ನಡೆದ ಶ್ರೀ ಗುರು ಕುಮಾರೇಶ್ವರ ಸಾಂಸ್ಕೃತಿಕ ಸೇವಾ ಸಂಸ್ಥೆ (ರಿ) ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ʼಸ್ವರ ಸಂಗಮ ಸಾಂಸ್ಕೃತಿಕʼ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಗೌರಿಶಂಕರ ಎಸ್.ಸಾಲಕ್ಕಿ ಉದ್ಘಾಟಿಸಿ ಮಾತನಾಡಿದರು.

ಸಂಗೀತವು ಜನಪ್ರಿಯವಾದದ್ದು, ಸ್ವರ ಮಾತಾಲಯ ಪಿತ ಎಂದು ಕರೆಯಲಾಗುತ್ತದೆ. ಸಂಗೀತ ಎಂದರೆ ತಾಯಿ ಸಮನಾದ ವಸ್ತು, ತಾಯಿ ಎಷ್ಟು ಸಮಾಧಾನ ಮಾಡುತ್ತಾಳೋ ಅಷ್ಟೇ ಸಂಗೀತವು ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿನೋದ ಕುಲಕರ್ಣಿ, ಸಿದ್ದಣ್ಣ ದುರ್ಗದ, ನಾಗೇಶ ಜಮಾದಾರ, ಭಾಗವಹಿಸಿದರು. ನಂತರ ಜಿಲ್ಲೆಯ ಹೆಸರಾಂತ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಸೂರ್ಯಕಾಂತ ಶಾಸ್ತ್ರೀ, ಪವಿತ್ರಾ ವಿಶ್ವನಾಥ, ಕಾಶಿನಾಥ ಯಂಗಟಿ, ವೀರಭದ್ರಯ್ಯ ಸ್ಥಾವರಮಠ, ಲಿಂಗಾನoದ ಚಿಕ್ಕಮಠ ಸ್ವರ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗುರುಶಾಂತಯ್ಯ ಸ್ಥಾವರಮಠ ಹಾರ್ಮೋನಿಯರಂ ಸಾಥ ಲೋಕನಾಥ ಚಾಂಗಲೇರ ತಬಲಾ ಸಾಥ ನೀಡಿದರು ಎಂದು ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಬೆಳಕೊಟಾ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News