ಕಲಬುರಗಿ : ಸಿದ್ಧಶ್ರೀ ಇಥೆನಾಲ್ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಸುಪ್ರೀಂ ಕೋರ್ಟ್ ಆದೇಶ : ರೈತರಿಂದ ಸಂಭ್ರಮ
Update: 2024-12-21 10:11 GMT
ಕಲಬುರಗಿ : ಚಿಂಚೋಳಿ ಇಲ್ಲಿನ ಸಿದ್ಧಶ್ರೀ ಇಥೆನಾಲ್ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ರೈತರು, ಕಾಳಗಿ ತಾಲೂಕಿನ ಕೋಡ್ಲಿ ಕ್ರಾಸ್ ಹತ್ತಿರ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಸತತವಾಗಿ ಎರಡು ತಿಂಗಳಿಂದ ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹದಂತಹ ಹೋರಾಟಗಳು ಮಾಡಿದ ಚಿಂಚೋಳಿ, ಕಾಳಗಿ, ಹುಮ್ನಾಬಾದ, ಕಮಲಾಪುರ, ಚಿತಾಪುರ, ಮತ್ತು ಸೇಡಂ ರೈತ ಬಾಂಧವರಿಗೆ ಅನುಕೂಲವಾಗಲಿದೆ ಎಂದು ಸ್ಥಳೀಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ವೀರಣ್ಣ ಗಂಗಾಣಿ, ಗೌರಿಶಂಕರ ಸುರ್ವಾರ್, ಶಂಕರ್ ಚೌಕ, ಬಸವರಾಜ ಕಲಬುರಗಿ, ನಾಗರಾಜ್ ಬೇವಿನ್, ಸಿದ್ದು ಬಬುಲಿ, ಮಾಳಪ್ಪ ಪೂಜಾರಿ, ಸಿದ್ದು ಗಾರಂಪಳ್ಳಿ ಅನೇಕ ರೈತ ಮುಖಂಡರು ಭಾಗಿಯಾಗಿದ್ದರು.