ಕಲಬುರಗಿ | ಬೆಳಗಾವಿಯ ಪಂಚಮಶೀಲ ಹೋರಾಟದಲ್ಲಿ ಲಾಠಿಚಾರ್ಜ್ ಖಂಡಿಸಿ ಪ್ರತಿಭಟನೆ

Update: 2024-12-12 17:54 GMT

ಕಲಬುರಗಿ : ಬೆಳಗಾವಿಯ ಸುವರ್ಣಸೌಧದ ಎದುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ದೀಕ್ಷ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ, ಅಖಿಲ ಭಾರತ ಲಿಂಗಾಯತ ದೀಕ್ಷೆ ಪಂಚಮಸಾಲಿ ಸಮಾಜದ ಕಲಬುರಗಿ ಜಿಲ್ಲಾ ಘಟಕದಿಂದ ಗುರುವಾರ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ನಿಯಂತ್ರಿಸಲು ಉದ್ದೇಶಪೂರ್ವಕವಾಗಿ ಲಾಠಿ ಚಾರ್ಜ್ ನೆಪದಲ್ಲಿ ಮಾರಣಾಂತಿಕ ಹಲ್ಲೆಗಳು ನಡೆಸಲಾಗಿವೆ, ಈ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯ ಪ್ರತಿಭಟನಾಕಾರರಿಗೆ ಗಂಭೀರ ಗಾಯಗಳಾಗಿದ್ದು, ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಲಿಂಗಾಯತರ ಹೋರಾಟವನ್ನು ಹತ್ತಿಕ್ಕಲು ಸರಕಾರ ಈ ಲಾಠಿ ಚಾರ್ಜ್ ನಡೆಸಿದೆ, ಕುತಂತ್ರದಿಂದ ಸಮುದಾಯದ ಮುಖಂಡರ ಮತ್ತು ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮರನಾಥ್ ಪಾಟೀಲ್, ಸಮಾಜದ ಜಿಲ್ಲಾಧ್ಯಕ್ಷ ಶರಣು ಪಪ್ಪಾ, ಪಂಚಸೇನೆಯ ಜಿಲ್ಲಾಧ್ಯಕ್ಷ ಸೋಮಶೇಖರ್ ಮುಳಗೆ, ಸಿದ್ದೇಶ್ ಕೂಡ್ಲೇ, ಸುಧಾ ಹಾಲಕಾಯಿ, ದಿವ್ಯ ಹಾಗರಗಿ, ಅರುಣಕುಮಾರ್ ಪಾಟೀಲ್ ಕೊಡಲ ಹಂಗರಗಾ, ಆನಂದ್ ಪಾಟೀಲ್, ಮಲ್ಲಿಕಾರ್ಜುನ್ ತಡಕಲ್, ಮಹಾಂತೇಶ ಪಾಟೀಲ್, ರವೀಂದ್ರ ಬಬಲೇಶ್ವರ, ಸುಭಾಷ್ ಡೆಂಕಿ, ಗಜಾನಂದ್ ಪಾಟೀಲ್, ಗಪ್ತಲಿಂಗ ಬಿರಾದಾರ್, ಲಕ್ಷ್ಮೀಪುತ್ರ ಪಾಟೀಲ್, ಶರಣಬಸಪ್ಪ ಪಾಟೀಲ್, ಸತೀಶ್ ಪನಶೆಟ್ಟಿ, ಶರಣಗೌಡ ಪಾಟೀಲ್, ಶಿವಪ್ರಕಾಶ್ ಹೀರಾ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News