ಕಲಬುರಗಿ | ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಹನುಮಂತರಾವ್‌ಗೆ ಅಭಿನಂದನಾ ಸಮಾರಂಭ
ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ, ಕವಿ, ಸಾಹಿತಿಯಾದ ಡಾ.ಹನುಮಂತರಾವ್ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ. ಅವರಿಗೆ ಪ್ರಶಸ್ತಿ ದೊರಕಿದ್ದು ಸರಕಾರಕ್ಕೆ ಘನತೆ ಬಂದಿದೆ ಎಂದು ಅಫಜಲ್‌ಪುರ ಶಾಸಕ ಎಂ.ವೈ.ಪಾಟೀಲ್ ಅಭಿಮತ ವ್ಯಕ್ತಪಡಿಸಿದ್ದಾರೆ.
ಸಿರಿಗನ್ನಡ ವೇದಿಕೆ ಮತ್ತು ಬುದ್ಧಂಕುರ ಪ್ರಕಾಶನದ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿಏರ್ಪಡಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿರಿಯ ಸಾಹಿತಿ ಡಾ.ಹನುಮಂತರಾವ್ ಬಿ.ದೊಡ್ಡಮನಿ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ದಲಿತ ಕುಟುಂಬದಿoದ ಬಂದು ಇಂತಹ ಹಂತಕ್ಕೆ ತಲುಪಿರುವುದು ನಮಗೆಲ್ಲಾ ಮಾದರಿ. ಸಮಾಜದ ನೈತಿಕ ಹೊಣೆಗಾರಿಕೆ ಲೇಖಕರಿಗೆ ಇದೆ. ಪ್ರಶಸ್ತಿ ರಾಜ ಮಹಾರಾಜರ ಕಾಲದಿಂದ ನಡೆದುಕೊಂಡು ಬಂದಿವೆ. ಕರ್ನಾಟಕ ಸರಕಾರ ಕೊಡುವ ಪ್ರಶಸ್ತಿ ತುಂಬಾ ಮಹತ್ವ ಪ್ರಜಾತಾಂತ್ರಿಕ ಪ್ರಶಸ್ತಿ ದಲಿತ ಕುಟುಂಬದಿoದ ಬಂದವರು ಚಾರಿತ್ರಿಕ ಹಿನ್ನೆಲೆಯಲ್ಲಿ ಜಾತಿ, ಗ್ರಾಮೀಣ, ಅಕ್ಷರ ಕಲಿತ ಎರಡನೇ ತಲೆಮಾರಿನ ಲೇಖಕರಾಗಿ, ಚಳವಳಿಗಾರರಾಗಿ, ಉಪನ್ಯಾಸಕರಾಗಿ ಡಾ.ಹನುಮಂತರಾವ್ ಅವರು ಗಮನ ಸೆಳೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೋರಾಟಗಾರ ಬಸಣ್ಣ ಸಿಂಗೆ, ಡಾ.ಗವಿಸಿದ್ಧಪ್ಪ ಪಾಟೀಲ್, ಬುದ್ಧo ಕುರ ಪ್ರಕಾಶನದ ಪ್ರಕಾಶಕ ಸಂತೋಷಕುಮಾರ ಎಸ್.ಕರಹರಿ, ಲೇಖಕ ಡಾ.ರಾಜಕುಮಾರ ಮಾಳಗೆ, ಡಾ.ಸಿದ್ಧಪ್ಪ ಹೊಸಮನಿ, ಬಸವರಾಜ ಕೊನೇಕ್, ಶಿವರಾಜ್ ಪಾಟೀಲ್, ಸುರೇಶ ಬಡಿಗೇರ, ಡಾ.ಸದಾನಂದ ಪೆರ್ಲ, ಡಾ.ನಾರಾಯಣ ರೋಳೇಕರ್, ಡಾ.ಪೀರಪ್ಪ ಸಜ್ಜನ, ಅಶೋಕ ಕಪನೂರ, ಡಾ.ವಿಜಯಕುಮಾರ ಕಾಂಬಳೆ, ಡಾ.ಕಗ್ಗನಮಡಿಗಿ, ಡಾ.ಅವಿನಾಶ ದೇವನೂರ, ಡಾ.ಪುಟ್ಟಮಣಿ ದೇವಿದಾಸ, ಗೌತಮ ಸಕ್ಕರಗಿ ಮತ್ತಿತರರಿದ್ದರು.