ಕಲಬುರಗಿ | ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್: ಐವರ ಬಂಧನ

Update: 2025-02-06 13:30 IST
ಕಲಬುರಗಿ | ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್: ಐವರ ಬಂಧನ
  • whatsapp icon

ಕಲಬುರಗಿ: ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಆರೋಪದಲ್ಲಿ ಐವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಆಝಾದಪುರದ ಉಮರ್ ಕಾಲನಿ ನಿವಾಸಿಗಳಾದ ಗುಲಾಮ್ ನಬಿ ಅಲಿಯಾಸ್ ಬಿಲಾಲ್(21), ಮುಹಮ್ಮದ್ ಪರ್ವೇಶ್(27), ಶೇಕ್ ಶೋಯೆಬ್(22), ಸೈಯದ್ ಕದೀರ್(24), ಗರೀಬ್ ನವಾಝ್ ಕಾಲನಿ ನಿವಾಸಿ ಅಸ್ಲಂ (24) ಬಂಧಿತ ಆರೋಪಿಗಳು.

ಮೊದಲ ಆರೋಪಿಯಾಗಿರುವ ಗುಲಾಮ್ ನಬಿ ವಿರುದ್ಧ ಇಲ್ಲಿನ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ಕಲಂ 28 ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ನಾಲ್ವರು ಆರೋಪಿಗಳ ವಿರುದ್ಧ ಕಲಂ 129 BNSS (PAR)ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೆಲವು ಯುವಕರು ಕೈಯಲ್ಲಿ ಮಾರಕಾಸ್ತ್ರ ಮತ್ತು ಪಿಸ್ತೂಲ್ ತರಹ (ಅನುಕರಣೆ) ಹೋಲುವ ಆಯುಧಗಳನ್ನು ಹಿಡಿದುಕೊಂಡು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಸಾರ್ವಜನಿಕರಿಗೆ ಭಯವನ್ನು ಹುಟ್ಟಿಸುತ್ತಿದ್ದಾರೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರಿಂದ ಮಾರಕಾಸ್ತ್ರ, ಪಿಸ್ತೂಲ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News