ಕಲಬುರಗಿ | 'ಸೀರಾಜನ್ ಮುನೀರಾ' ಪುಸ್ತಕ ಬಿಡುಗಡೆ
ಕಲಬುರಗಿ : ಇತ್ತೀಚೆಗೆ ನಿಧನರಾಗಿದ್ದ ದಿವಂಗತ ಡಾ.ಸೈಯದ್ ಷಾ ಖುಸ್ರೋ ಹುಸೈನಿ ಅವರು ರಚಿಸಿದ 'ಸೀರಾಜನ್ ಮುನೀರಾ' ಪುಸ್ತಕದ ಬಿಡುಗಡೆ ಸಮಾರಂಭವು ಶನಿವಾರ ಕೆಬಿಎನ್ ದರ್ಗಾದ ಸದರ್ ಸಫಾದಲ್ಲಿ ನಡೆಯಿತು.
ಪ್ರೊ.ಮುಸ್ತಫಾ ಷರೀಫ್ ಮಾತನಾಡಿ, 'ಸೀರಾಜನ್ ಮುನೀರಾ' ಎಂಬ ಪುಸ್ತಕವು ನಮ್ಮ ಪ್ರೀತಿಯ ಪ್ರವಾದಿ ಮುಹಮ್ಮದ್ (ಸ) ಅವರ ಸಾರ್ವತ್ರಿಕತೆಯನ್ನು ಒತ್ತಿಹೇಳುವ 'ಕಲ್ ಕಿ ಅವತಾರ್' ಮತ್ತು ಪುರಾಣಗಳನ್ನು ಒಳಗೊಂಡಂತೆ ಹಲವಾರು ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನವದೆಹಲಿ ದರ್ಗಾ ಹಝ್ರತ್ ನಿಜಾಮುದ್ದೀನ್ ಔಲಿಯಾ ಸಜ್ಜಾದ ನಶೀನ್ ಖ್ವಾಜಾ ಸೈಯದ್ ಮುಹಮ್ಮದ್ ನಿಜಾಮಿ, ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಸುಲೈಮಾನ್ ಸಿದ್ದಿಕಿ, ಕೆಬಿಎನ್ ವಿವಿ ಕುಲಾಧಿಪತಿ ಜನಾಬ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಡಾ.ಮುಸ್ತಫಾ ಅಲ್ ಹುಸೈನಿ, ಸಯ್ಯದ್ ಶಾಹ್ ಯೂಸುಫ್ ಹುಸೈನಿ, ದರ್ಗಾ ಶರೀಫ್ ಮಸೀದಿಯ ಖತೀಬ್ ಇಮಾಮ್ ಹಾಫಿಝ್ ಖಾರಿ ಮುಹಮ್ಮದ್ ರೋಶನ್ ಖಾನ್, ತಯ್ಯಬ್ ಯಾಕುಬಿ, ಖಾಸಿಮ್ ಶಾ ಬಂದಾ ನವಾಜಿ, ಪ್ರೊ.ಅಬ್ದುಲ್ ಹಮೀದ್ ಅಕ್ಬರ್, ಹೈದರ್ ಪಾಷಾ ನೀಲಂಗಾ ಶರೀಫ್, ಪ್ರೊ.ಮುಸ್ತಫಾ ಶರೀಫ್, ಸೈಯದ್ ಹಾಶಿಮ್ ಪೀರ ಮತ್ತಿತ್ತರರು ಇದ್ದರು.