ಕಲಬುರಗಿ | ಸಾಹಿತ್ಯ ಸಾರಥಿ ಪ್ರಶಸ್ತಿಗೆ 12 ಜನ ಸಾಧಕರ ಆಯ್ಕೆ: ನಿರಗುಡಿ

Update: 2024-12-19 14:27 GMT

ಕಲಬುರಗಿ : ರಾಜ್ಯಮಟ್ಟದ ಸಾಹಿತಿಕ ಮಾಸ ಪತ್ರಿಕೆ ಸಾಹಿತ್ಯ ಸಾರಥಿ ಆರು ವರ್ಷಗಳಿಂದ ನಿರಂತರವಾಗಿ ಸಂಭ್ರಮ ಮಾಡುತ್ತಾ ಬರುತ್ತಿದೆ. ಅದರ ಪ್ರಯುಕ್ತ ಸಂಚಿಕೆ ಬಿಡುಗಡೆ ಹಾಗೂ 2024ನೇ ಸಾಲಿನ 12ಜನ ಸಾಧಕರನ್ನು ರಾಜ್ಯ ಮಟ್ಟದ ಸಾಹಿತ್ಯ ಸಾರಥಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆ ಸಂಪಾದಕರಾದ ಬಿ.ಎಚ್.ನಿರಗುಡಿ ತಿಳಿಸಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ದೇವು ಪತ್ತಾರ್ ಬುಕ್ ಬ್ರಹ್ಮ, ವಿಶ್ವರಾಧ್ಯ ಸತ್ಯಂಪೇಟೆ, ಜಯತೀರ್ಥ ಪಾಟೀಲ್, ಸಾಹಿತ್ಯ ಕ್ಷೇತ್ರ ವಿಭಾಗದಲ್ಲಿ ಡಾ.ಕಾವ್ಯಶ್ರೀ ಮಾಹಾಗಾಂಕರ್, ಡಾ.ಲಿಂಗಣ್ಣ ಗೋನಾಳ ,ಡಾ. ಚಿ.ಸಿ.ನಿಂಗಣ್ಣ, ಸಮಾಜ ಸೇವೆಯ ವಿಭಾಗದಲ್ಲಿ ರವೀಂದ್ರ ಶಾಬಾದಿ, ಕಲ್ಯಾಣರಾವ ಶೀಲವಂತ, ವೈದ್ಯಕೀಯ ಕ್ಷೇತ್ರದ ವಿಭಾಗದಲ್ಲಿ ಸಿದ್ದು ಪಾಟೀಲ್, ಶಿಕ್ಷಣ ಕ್ಷೇತ್ರದ ವಿಭಾಗದಲ್ಲಿ ಚಕೋರ ಮೆಹತಾ, ಕಲಾ ಕ್ಷೇತ್ರದ ವಿಭಾಗದಲ್ಲಿ ಡಾ.ಅಶೋಕ ಶಟಗಾರ, ಸಂಗೀತ ಕ್ಷೇತ್ರದಲ್ಲಿ ಡಾ.ರೇಣುಕಾ ಹಾಗರಗುಂಡಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು 2025ರ ಜ.5 ರಂದು ಇಲ್ಲಿನ ಜಗತ್ ಸರ್ಕಲ್ ಬಳಿ ಇರುವ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ನಿರಗುಡಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News