ಕಲಬುರಗಿ | ಶಹಾಬಾದ್ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ : ಲಾಂಛನ ಬಿಡುಗಡೆ
ಕಲಬುರಗಿ : ಡಿ.27 ರಂದು ನಡೆಯುವ ಶಹಾಬಾದ್ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಮಾದರಿಯಾಗುವ ರೀತಿಯಲ್ಲಿ ಯಶಸ್ವಿಗೊಳಿಸೋಣ ಎಂದು ಕಸಾಪ ಸಲಹೆಗಾರ ಮರಿಯಪ್ಪ ಹಳ್ಳಿ ಹೇಳಿದರು.
ಡಿ. 27ರಂದು ನಡೆಯಲಿರುವ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ನಗರದ ನಗರದ ಕನ್ನಡ ಭವನದಲ್ಲಿ (ಲೋಗೋ) ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಶೇ.80ರಷ್ಟು ಸಮ್ಮೇಳನದ ಸಿದ್ಧತೆ ಮಾಡಲಾಗಿದೆ. ಸಂಪನ್ಮೂಲ ಕ್ರೋಢಿಕರಣವು ಮಾಡಲಾಗಿದೆ. ಸ್ಮರಣ ಸಂಚಿಕೆಯೂ ಮುದ್ರಣಕ್ಕೆ ನೀಡಲಾಗಿದೆ. ಆಹ್ವಾನ ಪತ್ರಿಕೆ ಸಿದ್ದಗೊಂಡಿವೆ. ಸಮ್ಮೇಳನದ ವಿವಿಧ ಸಮಿತಿಗಳು ರಚನೆಯಾಗಿದ್ದು, ಆಯಾ ಸಮಿತಿಗಳನ್ನು ಹಂಚಿಕೆ ಮಾಡಲಾಗಿದೆ. ಸಮ್ಮೇಳನ ನಡೆಯುವ ಸ್ಥಳ ಗೊತ್ತು ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಪೂರ್ವಭಾವಿ ಸಭೆ ಮಾಡಲಾಗಿದ್ದು, ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಬಸವರಾಜ ಮತ್ತಿಮಡು ಆಗಮಿಸಲಿದ್ದಾರೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್ ಜಗದೀಶ ಚೌರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ತಾಪಂ ಇಒ ಮಲ್ಲಿನಾಥ ರಾವೂರ, ಪೌರಾಯುಕ್ತ ಕೆ.ಗುರುಲಿಂಗಪ್ಪ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಶಿವಾನಂದ ಪಾಟೀಲ ಮರತೂರ, ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ಅಣವೀರ ಇಂಗನಶೆಟ್ಟಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ ಮುತ್ತಟ್ಟಿ, ಮೃತ್ಯುಂಜಯ ಹಿರೇಮಠ, ಪೀರ್ ಪಾಶಾ, ನಿಂಗಣ್ಣ ಹುಳುಗೋಳಕರ್, ರಾಜು ಕೋಬಾಳ, ಶರಣು ಪಗಾಲಾಪುರ, ಮಾಣಿಕಗೌಡ ಪೊಲೀಸ್ ಪಾಟೀಲ, ಹಾಷಮ್ ಖಾನ್, ಅಜೀಮ್ ಸೇಠ,ದಶರಥ ಕೋಟನೂರ, ರಾಜಶೇಖರ ದೇವರಮನಿ, ಬಾಬುರಾವ ಪಂಚಾಳ, ಯಲ್ಲಾಲಿಂಗ ಹೈಯ್ಯಳಕರ್, ವಿಶ್ವರಾಜ ಫಿರೋಜಾಬಾದ್, ಭೀಮಗೌಡ ಖೇಣಿ, ಅಜಿತ್ ಪಾಟೀಲ, ರಾಜೇಶ್ ಯನಗುಂಟಿಕರ, ನಾಗಣ್ಣ ರಾಂಪುರೆ, ಮಲ್ಲೇಶಿ ಭಜಂತ್ರಿ, ಚಂದ್ರಕಾoತ ಪಾಟೀಲ,ಅಪ್ಪುಗೌಡ ತರನಳ್ಳಿ ಸೇರಿದಂತೆ ಅನೇಕರು ಇದ್ದರು.
ಪಿ.ಎಸ್.ಮೇತ್ರಿ ನಿರೂಪಿಸಿದರು, ಬಸವರಾಜ ಮದ್ರಿಕಿ ಸ್ವಾಗತಿಸಿದರು, ಶರಣು ವಸ್ತದ್ ವಂದಿಸಿದರು.