ಕಲಬುರಗಿ | ಏಕವಲಯ ಪುರುಷರ ವಾಲಿಬಾಲ್ ಟೂರ್ನಿ : ಶ್ಯಾಮ್ ಸುಂದರ್ ಕಾಲೇಜಿಗೆ ಪ್ರಶಸ್ತಿ
Update: 2024-12-06 07:13 GMT
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯ ಏಕ ವಲಯ ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಬಿ.ಶ್ಯಾಮ್ ಸುಂದರ್ ಬಿ.ಪಿ.ಎಡ್ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ.
ಸೇಡಂ ರಸ್ತೆಯಲ್ಲಿರುವ ಸರಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಕಾಲೇಜಿನ ಆವರಣದಲ್ಲಿಏಕ ವಲಯ ಪುರುಷರ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಯಿತು.
ವಾಲಿಬಾಲ್ ಟೂರ್ನಿಯಲ್ಲಿ ಬಿ. ಶ್ಯಾಮ್ ಸುಂದರ್ ಬಿ.ಪಿ.ಎಡ್ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ. ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ, ಡಾ.ವಿಶ್ವನಾಥ್ ಬೆನ್ನೂರ್ ಹಾಗೂ ಚಂದ್ರಕಾಂತ್ ಶಿರೋಳಿ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ಡಾ.ವಿಜಯಕುಮಾರ್ ಸಾಲಿಮನಿ, ಡಾ.ಬಲ ಭೀಮ್ ಸಾಂಗ್ಲಿ ಸೇರಿದಂತೆ ಮತ್ತಿತರರು ಇದ್ದರು.
ಪಂದ್ಯಾವಳಿಯಲ್ಲಿ ಎಂ.ಎಸ್.ಇರಾನಿ ಪದವಿ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದಿದೆ.