ಕಲಬುರಗಿ | ಕುವೆಂಪು ಅವರು ವೈಚಾರಿಕತೆಯ ಪ್ರತಿಪಾದಕರು : ತೇಗಲತಿಪ್ಪಿ
ಕಲಬುರಗಿ : ಜಗದ ಕವಿ, ಯುಗದ ಕವಿ ಎಂದೇ ಪ್ರಸಿದ್ಧಿ ಪಡೆದ ರಾಷ್ಟ್ರಕವಿ ಕುವೆಂಪು ಅವರು ವೈಚಾರಿಕತೆ ಪ್ರತಿಪಾದಿಸಿದವರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ರವಿವಾರ ಏರ್ಪಡಿಸಿದ ʼರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮʼಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಅವರ ಕೃತಿಗಳಲ್ಲಿ ಸಾಮಾಜಿಕ ಪ್ರಜ್ಞೆ, ವಿಶ್ವ ಮಾನವ ಪರಿಕಲ್ಪನೆ ಹಾಗೂ ಬಸವಾದಿ ಶರಣರ ಸಂದೇಶಗಳನ್ನು ಕಾಣಬಹುದಾಗಿದೆ. ವಾಸ್ತವ ನೆಲೆಗಟ್ಟಿನಲ್ಲಿ ಸಾಮಾಜಿಕ ತಲ್ಲಣಗಳ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಅವರ ಸಂದೇಶಗಳು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಅಧೀಕ್ಷಕ ಅಭಿಯಂತರರಾದ ಮಹಮ್ಮದ್ ಇಬ್ರಾಹಿಂ, ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಅವರು, ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಕಾವ್ಯದ ಮೂಲಕ ವಿಶ್ವ ಮಾನವ ಸಂದೇಶ ಮತ್ತು ವ್ಯವಸ್ಥೆ ವಿರುದ್ಧ ವೈಚಾರಿಕ ಪ್ರಜ್ಞೆ ಮೆರೆದ ಕವಿ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ್ ಅಂಡಗಿ, ಸಂತೋಷ್ ಕುಡಳ್ಳಿ ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರವೀಂದ್ರ ಕುಮಾರ್ ಬಂಟನಹಳ್ಳಿ, ಸಂತೋಷ್ ಕುಡಳ್ಳಿ ಪ್ರಭುಲಿಂಗ ಮೂಲಿಗೆ ರವಿಕುಮಾರ್, ಶಹಾಪುರಕರ್, ಭಾನುಕಾಂತ್ ರೆಡ್ಡಿ ಸಂತೋಷ ಮೂಳಜೆ, ಮಂಜುನಾಥ ಕಂಬಾಳಿಮಠ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ, ರೂಪಾ ಪೂಜಾರಿ, ಧರ್ಮರಾಜ ಜವಳಿ, ಸುನೀಲ್ ಇಟಗಿ, ವೀರಣ್ಣ ನಿಂಬರ್ಗಿ, ಗಣೇಶ ಚಿನ್ನಾಕಾರ, ಝಾಕೀರ್ ಹುಸೇನ್, ಈರಣ್ಣಾ ಸೋನಾರ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಮಲ್ಲಿನಾಥ ಸಂಗಶೆಟ್ಟಿ, ಪ್ರಭವ ಪಟ್ಟಣಕರ್ ಸೇರಿದಂತೆ ಇನ್ನಿತರರು ಇದ್ದರು.