ಕಲಬುರಗಿ | ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ : ಆರೋಪಿಗಳ ಬಂಧನಕ್ಕೆ ವಿಶ್ವಕರ್ಮ ಸಮಾಜ ಆಗ್ರಹ

Update: 2025-01-01 10:20 GMT

ಕಲಬುರಗಿ : ಬೀದರ್ ನ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ವಿಶ್ವಕರ್ಮ ಸಮಾಜದಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿ, ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತನಗೆ ಕಿರುಕುಳ ನೀಡಿದ್ದಾರೆಂದು ಸಚಿನ್ ಡೆತ್ ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಆತ್ಮಹತ್ಯೆಗೆ ಕಾರಣರಾದ ಪ್ರಮುಖ ಆರೋಪಿಗಳನ್ನು ಇಲ್ಲಿವರೆಗೆ ಬಂಧಿಸದಿರುವುದು ಖಂಡನಾರ್ಹ. ಅಲ್ಲದೆ ಸಚಿನ್ ಗೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಒಡ್ಡಿರುವುದು ಗೊತ್ತಾಗಿದೆ. ಇಷ್ಟಾದರೂ ಆರೋಪಿಗಳನ್ನು ಇನ್ನು ಕೂಡ ಬಂಧಿಸದೆ ಸಮಯ ವ್ಯರ್ಥ ಮಾಡುತ್ತಿರುವುದು ಸರ್ಕಾರದ ಧೋರಣೆ ಸರಿಯಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಆತ್ಮಹತ್ಯೆಗೆ ಶರಣಾದ ಸಚಿನ್ ಕುಟುಂಬಕ್ಕೆ ಸುಮಾರು ಒಂದು ಕೋಟಿ ರೂ. ಪರಿಹಾರ ಘೋಷಿಸಬೇಕು, ಅಲ್ಲದೆ ಅವರ ಕುಟುಂಬದ ಹೆಣ್ಣು ಮಕ್ಕಳೊಬ್ಬರಿಗೆ ಸರಕಾರಿ ನೌಕರಿಯನ್ನು ಒದಗಿಸಿ ಕೊಡಬೇಕೆಂದು ಮುಖಂಡರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಮಚಂದ್ರ ಮಹಾಸ್ವಾಮಿಗಳು, ದೊಡ್ಡೆಂದ್ರ ಮಹಾಸ್ವಾಮಿ ಏಕದಂಡಗಿ, ಪ್ರಣವ ನಿರಂಜನ ಸ್ವಾಮಿಗಳು, ಬ್ರಹ್ಮಾನಂದ ಸ್ವಾಮೀಜಿ, ದೇವೇಂದ್ರ ಸ್ವಾಮೀಜಿ, ಶಿವಾನಂದ ಶಾಸ್ತ್ರಿ, ದೇವೇಂದ್ರ ದೇಸಾಯಿ ಕಲ್ಲೂರ, ಚಿತ್ರಲೇಖ ವಿಶ್ವಕರ್ಮ, ಲೋಹಿತ್ ಕಲ್ಲೂರ, ಕುಪ್ಪಣ್ಣ ಖೇಳಗಿ, ರಾಕೇಶ್ ಮಾಡ್ಯಾಳ್, ವಿಶ್ವನಾಥ್ ಸೋನಾರ್, ಈರಣ್ಣ ದುತ್ತರಗಾವ್, ಶಿವಾನಂದ್ ಕಲ್ಲೂರ್, ದಶರಥ ಪೊದ್ದಾರ, ರಾಜು ಖೇಳಗಿ, ಲೋಕೇಶ್ ಶೀಲವಂತ, ಮಹೇಶ್ ತಡಕಲ್, ಅವಣ್ಣ ಮ್ಯಾಕೆರಿ, ಶರಣಪ್ಪ ತಳವಾರ್ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News