ಕಲಬುರಗಿ | ಬಾಕಿ ಉಳಿದ ಕಬ್ಬು ಕಟಾವಿಗೆ ಸೂಚಿಸುವಂತೆ ರೈತರಿಂದ ಮನವಿ
ಕಲಬುರಗಿ : ಚಿಂಚೊಳಿ ಮತ್ತು ಕಾಳಗಿ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಕಬ್ಬು ಬೆಳೆದು ನಿಂತು, ಕಬ್ಬು ಒಣಗುವ ಭಿತಿಯಲ್ಲಿದೆ. ಸಕ್ಕರೆ ಕಾರ್ಖಾನೆಗಳಿಗೆ ಗ್ರಾಮಗಳು ಹಂಚಿಕೆ ಮಾಡಿ ಜಿಲ್ಲಾಡಳಿತ ಆದೇಶ ನೀಡಿದ್ದು, ತಕ್ಷಣ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡಲು ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ಘಟಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಚಿಂಚೊಳಿ ತಾಲ್ಲೂಕಿನ ನಿಂಗದಳ್ಳಿ, ಚನ್ನೂರು, ಚಂದನಕೆರಾ, ಕೊಟಗಿ, ಪಂಗರಗಾ, ಐನಾಪುರ, ರಾಣಾಪೂರ, ನಿಂಗದಳ್ಳಿ. ಕಾಳಗಿ ತಾಲ್ಲೂಕಿನ ರಟಕಲ್, ಕಂಚನಾಳ, ಮುಕರಂಬಾ, ಭೂತಪೂರು, ರುದ್ದನೂರು, ಮಂಗಲಗಿ, ಹುಳಿಗೆರಾ, ಕೊಡದುರು, ಬೊಳೆವಾಡ ಟೆಂಗಳಿ, ಕೊರವಾರ, ಮಲಘಾಣ, ಸೂಗುರು, ಹೆಬ್ಬಾಳ, ಮತ್ತು ಇನ್ನೂ ನೂರಾರು ಹಳ್ಳಿಗಳಲ್ಲಿ ಅಂದಾಜು 1000ರಾರು ಹೆಕ್ಟೇರ್ ಕಬ್ಬು ಕಟಾವು ಆಗದೆ ಉಳಿದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತರ ಬೆಳೆದ ಕಬ್ಬು ಬೆಳೆಗಾರರ ನೆರವಿಗೆ ತಕ್ಷಣವೇ ತಾಲ್ಲೂಕು ಆಡಳಿತ ಮತ್ತು ಜಿಲ್ಲಾ ಆಡಳಿತ ಮಧ್ಯಸ್ಥಿಕೆ ವಹಿಸಿ ಉಳಿದ ಕಬ್ಬು ಕಟಾವು ಮಾಡಿಸಲು ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ವಿರಣ್ಣಾ ಗಂಗಾಣಿ, ರೈತ ಮುಖಂಡರಾದ ರಾಜಶೇಖರ್ ಗುಡದಾ ಉಮಕಾಂತ್ ಜೀರಿಗಿ, ಸಂಜುಕುಮಾರ್ ಪಡಶೆಟ್ಟಿ, ಗುಂಡಪ್ಪ ಮಾಳಗಿ, ಪೃಥ್ವಿರಾಜ್ ನಾಮ್ದಾರ್, ರಾಮರಾವ್ ಮಹಾರಾಜ್ ಸೇರಿದಂತೆ ಹಲವರು ಇದ್ದರು.